ಬದಲಾಗುತ್ತಿರುವ ತುಳು ಭಾಷೆಯ ಅನನ್ಯತೆಯ ನೆಲೆಗಳು
Update: 2017-11-11 08:34 GMT
‘ತುಳು’ ಎನ್ನುವ ಹೆಸರಿನ ಭಾಷೆಯು ಭಾರತದ ಪಶ್ಚಿಮ ಕರಾವಳಿಯಲ್ಲಿನ ಐತಿಹಾಸಿಕವಾಗಿ ‘ತುಳುನಾಡು/ತುಳು ದೇಶ/ ತುಳುವ’ದಲ್ಲಿನ ಜನರ ಆಡುಭಾಷೆ. ತುಳುನಾಡು/ತುಳು ದೇಶದ ಉಲ್ಲೇಖ ಸುಮಾರು ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ತುಳು ಭಾಷೆಯ ಬಗ್ಗೆ ಸಂಶೋಧನೆ ನಡೆಸಿದ ಭಾಷಾವಿಜ್ಞಾನಿಗಳು ಅದು ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆ ಎಂದೂ ಅದು ಮೂಲದ್ರಾವಿಡದಿಂದ ಆರಂಭದಲ್ಲೇ ಪ್ರತ್ಯೇಕವಾಗಿ ಕವಲೊಡೆದ ಭಾಷೆಯೆಂದೂ ತೀರ್ಮಾನಿಸಿದ್ದಾರೆ.
ಅನನ್ಯತೆ, ‘ಅಸ್ಮಿತೆ’, ‘ಐಡೆಂಟಿಟಿ’ ಎನ್ನುವುದು ವ್ಯಕ್ತಿಗಳಿಗಾಗಲೀ ಸಮುದಾಯಗಳಿಗಾಗಲೀ ವ್ಯಾಪಕ ಸಾಮಾಜಿಕ ಘಟಕಗಳಿಗಾಗಲೀ ಮುಖ್ಯವಾದ ಮನ್ನಣೆಯ ಒಂದು ಅಂಶ. ಒಂದು ಸಮುದಾಯದ ಸದಸ್ಯರನ್ನು ಒಂದುಗೂಡಿ