ಚಾಮರಾಜನಗರ: ವಕೀಲರ ಸಂಘದಿಂದ ದಿನಚರಿ ಪುಸ್ತಕ ಬಿಡುಗಡೆ

Update: 2018-01-03 17:18 GMT

ಚಾಮರಾಜನಗರ, ಜ.2: ಜಿಲ್ಲೆಯ ಅಭಿವೃದ್ದಿ ಹಾಗೂ ಸಮುದಾಯದ  ಬೆಳವಣಿಗೆಯಲ್ಲಿ ವಕೀಲರು ಹಾಗೂ ನ್ಯಾಯಾಧೀಶರ ಪಾತ್ರ ಮಹತ್ವವಾಗಿದೆ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರ ಬರಲು ಎಲ್ಲಾ ಸ್ತರದ ಜನರು ಸಹ ತಮ್ಮ ಕರ್ತವ್ಯವನ್ನು  ಸರಿಯಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯದೀಶರಾದ ಎಚ್.ಜಿ. ನಾಗರತ್ನ ತಿಳಿಸಿದರು. 

ನಗರದ ವಕೀಲರ ಸಂಘದ  ಗ್ರಂಥಾಲಯದ ಸಭಾಂಗಣದಲ್ಲಿ  ವಕೀಲರ ಸಂಘದಿಂದ  ಹೊರ ತಂದಿರುವ 2018ರ ದಿನಚರಿ ಪುಸ್ತಕವನ್ನು ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ವಕೀಲರ ಸಂಘದ ಹೆಚ್ಚಿನ ರೀತಿಯಲ್ಲಿ ಸಂಘಟನೆಗೊಂಡಿದೆ. ವಕೀಲರಲ್ಲಿ  ಸೇವಾ ಮನೋಭಾವನೆ ಇದೆ. ಇಂಥ ವಕೀಲರ ಸಂಘ ಕಾರ್ಯವೈಖರಿ ನೋಡಿ ಬಹಳ ಖುಷಿಯಾಗಿದೆ. ಕರ್ನಾಟಕದ್ಯಂತ ಇರುವ ವಕೀಲರ ಸಂಘಗಳಿಗಿಂತ ಚಾಮರಾಜನಗರ ಜಿಲ್ಲೆ ವಕೀಲರ ಸಂಘ ಮೊದಲ ಪಂಕ್ತಿಯಲ್ಲಿದೆ. ಭವ್ಯವಾದ ಕಟ್ಟಡ, ಸದಾ ಲವಲವಿಕೆಯಿಂದ ಕಾರ್ಯನಿರ್ವಹಿಸುವ ಜೊತೆಗೆ ಜನ ಸಾಮಾನ್ಯರಿಗೆ  ಕಾನೂನು ಅರಿವು ಮೂಡಿಸಿ  ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮ ವಹಿಸುತ್ತಿದೆ ಎಂದು ವಕೀಲರ ಸಂಘವನ್ನು  ಪ್ರಶಂಸಿಸಿದರು. 

ಜಿಲ್ಲೆಯಲ್ಲಿ  ನಡೆಯುವ ಆಗುಹೋಗುಗಳು ಹಾಗೂ ಅಭಿವೃದ್ದಿ ಪರವಾದ ಬರಹಗಳು  ಪತ್ರಕರ್ತರಿಂದ ಮೂಡಿಬರಬೇಕು. ಜಿಲ್ಲೆಯ ಬಗ್ಗೆ ಇತರ ಜಿಲ್ಲೆಯ ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುವಂತೆ ಅಭಿವೃದ್ದಿ ಹೊಂದುತ್ತಿರುವ ಜಿಲ್ಲೆಯ ಬಗ್ಗೆ  ಎಚ್ಚರಿಸುವಂತಹ ಲೇಖನಗಳು ಮೂಡಿ ಬರಬೇಕು. ಖಡ್ಗಗಿಂತ ಹರಿತವಾಗಿರುವ ಲೇಖನಿಯನ್ನು ಬಳಕೆ ಮಾಡಿಕೊಂಡು ಜಿಲ್ಲೆಯ ಅಭಿವೃದ್ದಿಯತ್ತ ಕೊಂಡೊಯ್ಯಬೇಕು  ಎಂದು ನಾಗರತ್ನ  ಅವರು ಕಿವಿಮಾತು ಹೇಳಿದರು. 

2018ರ ನೂತನ ವರ್ಷವು ಎಲ್ಲರಿಗೂ ಒಳ್ಳೆದನ್ನು ಮಾಡಲು, ಸುಖ, ಶಾಂತಿ ಸಮೃದ್ದಿಯನ್ನು  ನೀಡಲಿ ಎಂದು  ಶುಭಾಶಯ ಕೋರಿದರು. 
ವಕೀಲ ಸಂಘದ ಅಧ್ಯಕ್ಷ ಉಮ್ಮತ್ತೂರು ಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ವಕೀಲರ ಹಿತವನ್ನು ಬಯಸಿ, ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಪ್ರತಿ ವರ್ಷದಂತೆ ಈ ಬಾರಿ ವಕೀಲರ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ನ್ಯಾಯಾದೀಶರು ವಕೀಲರ ಸಂಘದ  ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಘದ ಕಾರ್ಯಕ್ರಮಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದಾರೆ. ಅವರ ಸಲಹೆ,ಸಹಕಾರ  ವಕೀಲರ ಸಂಘಕ್ಕೆ ಹೆಚ್ಚಿನ ರೀತಿಯಲ್ಲಿ ದೊರೆಯಲಿ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ  ನ್ಯಾಯಾಧೀಶರಾದ  ಎಚ್.ಜಿ. ನಾಗರತ್ನ ಅವರು  ಕೇಕ್ ಕತ್ತರಿಸಿ ನೂತನ ವರ್ಷಕ್ಕೆ ಶುಭ ಕೋರಿದರು. ನ್ಯಾಯಾಧೀಶರಾದ ಹೆಚ್ಚುವರಿ  ಜಿಲ್ಲಾ ನ್ಯಾಯಾಧೀಶರಾದ ಡಿ.ವಿನಯ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಆರ್.ಪಿ. ನಂಧೀಶ್, ಹಿರಿಯ ಸಿವಿಲ್ ನ್ಯಾಯಾದೀಶರಾದ ವಿ. ದೀಪಾ, ಸಂದೇಶ್‍ವಿ. ಭಂಡಾರ್ ಅವರು ನೂತನ ವರ್ಷದ ಶುಭ ಕೋರಿದರು. 

ವೇದಿಕೆಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್, ಖಜಾಂಚಿ ಮಹಾಲಿಂಗಸ್ವಾಮಿ, ಜಂಟಿ  ಕಾರ್ಯದರ್ಶಿ  ದಲಿತ್ ರಾಜ್, ಹಿರಿಯ ವಕೀಲರಾದ ಎಂ. ಚಿನ್ನಸ್ವಾಮಿ,  ಬಾಲಸುಬ್ರಮಣ್ಯ, ಪುಟ್ಟರಾಜು, ಕೆ.ಎನ್. ಮಂಜುಳಾ,  ಮಹೇಶ್‍ಕುಮಾರ್, ಆರ್. ಗಿರೀಶ್, ಬಿ. ವನಾಜಾಕ್ಷಿ, ಮೋಹನ್‍ಜಗದೀಶ್, ಎಚ್.ಎಸ್. ಮಹೇಂದ್ರ ಸೇರಿದಂದ ವಕೀಲರು ಭಾಗವಹಿಸಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News