ಮಹಾರಾಷ್ಟ್ರ: ಬುಧವಾರದ ಬಂದ್ ವೇಳೆ 16 ವರ್ಷದ ಬಾಲಕ ಮೃತ್ಯು

Update: 2018-01-04 10:49 GMT

ಮುಂಬೈ, ಜ.4: ಬುಧವಾರ ಭೀಮಾ ಕೋರೆಗಾಂವ್ ಪ್ರತಿಭಟನಕಾರರು ಕರೆ ನೀಡಿದ್ದ ಬಂದ್ ವೇಳೆ ಮರಾಠವಾಡ ಪ್ರಾಂತ್ಯದ  ನಂದೇಡ್ ನಗರದಲ್ಲಿ  ರಸ್ತೆ ತಡೆ ನಡೆಸುತ್ತಿದ್ದ ಗುಂಪೊಂದರ ಭಾಗವಾಗಿದ್ದ 16 ವರ್ಷದ ಬಾಲಕನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾಲ್ತುಳಿತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ.

ಪೊಲೀಸರು ಪ್ರತಿಭಟನಕಾರರನ್ನು ಸ್ಥಳದಿಂದ ಚದುರಿಸುತ್ತಿದ್ದ ವೇಳೆ ಯೋಗೇಶ್ ಜಾಧವ್ ಎಂಬ ಹೆಸರಿನ ಈ ಬಾಲಕ ಇತರ ಪ್ರತಿಭಟನಾಕಾರರ ಜತೆ ಓಟಕ್ಕಿತ್ತರೂ ದಾರಿ ಮಧ್ಯೆ ಆತ ಬಿದ್ದಾಗ ಇತರರು ಆತನನ್ನು ತುಳಿದುಕೊಂಡೇ ಓಡಿದ್ದರು. ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಹಡ್ಗಾಂವ್ ನ ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಆತ ಪೊಲೀಸ್ ಲಾಠಿ ಚಾರ್ಜ್ ನಿಂದಾಗಿ ಮೃತಪಟ್ಟಿದ್ದಾನೆಂದು ಕೆಲ  ಪ್ರತಿಭಟನಕಾರರು ಆರೋಪಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಇನ್ನೂ ನಡೆದಿಲ್ಲ ಹಾಗೂ ಆತನ ಕುಟುಂಬಕ್ಕೆ ಇನ್ನಷ್ಟೇ ಮೃತದೇಹ ಹಸ್ತಾಂತರಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News