ಮಹಿಳೆಗೆ ಕಿರುಕುಳ: ಏಂಜೆಲ್ ಹೂಡಿಕೆದಾರನ ವಿರುದ್ಧ ಪ್ರಕರಣ ದಾಖಲು

Update: 2018-01-04 13:29 GMT

ಮುಂಬೈ,ಜ.4: ದಿಲ್ಲಿಯ ಮಹಿಳೆಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮುಂಬೈ ನಿವಾಸಿ ಏಂಜೆಲ್ ಹೂಡಿಕೆದಾರ ಮಹೇಶ ಮೂರ್ತಿ ವಿರುದ್ಧ ಇಲ್ಲಿಯ ಖಾರ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮಹಿಳೆಯ ದೂರಿನ ಮೇರೆಗೆ ಐಪಿಸಿ ಮತ್ತು ಐಟಿ ಕಾಯ್ದೆಯ ಸಂಬಂಧಿತ ಕಲಮ್‌ಗಳಡಿ ಮೂರ್ತಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಮಹಿಳೆಯು ತನಗೆ ಸಲ್ಲಿಸಿದ್ದ ದೂರಿನ ಕುರಿತು ರಾಷ್ಟ್ರೀಯ ಮಹಿಳಾ ಆಯೋಗವು ಮಹಾರಾಷ್ಟ್ರ ಪೊಲೀಸರಿಗೆ ಪತ್ರ ಬರೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News