ಮುಂಬೈಯ ಕಮಲಾ ಮಿಲ್ಸ್ ಅಗ್ನಿ ಅನಾಹುತಕ್ಕೆ ಕಾರಣವಾದದ್ದು ಏನು?

Update: 2018-01-06 08:19 GMT

ಮುಂಬೈ, ಜ.6: ಇತ್ತೀಚೆಗೆ ಮುಂಬೈನ ಕಮಲಾ ಮಿಲ್ಸ್ ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಅಕ್ರಮ ಹುಕ್ಕಾ ಬಾರ್ ನಲ್ಲಿ ಕಿಡಿಗಳು ಹಾರಿದ್ದೇ ಕಾರಣ ಎಂದು ಅಗ್ನಿಶಾಮಕ ದಳದ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ.

ಡಿಸೆಂಬರ್ 29ರಂದು ಕಮಲಾ ಮಿಲ್ಸ್ ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 14 ಮಂದಿ ಮೃತಪಟ್ಟಿದ್ದರು. ಹಲವರು ಪಬ್ ನ ಶೌಚಾಲಯದಲ್ಲಿ ಸಿಲುಕಿಕೊಂಡಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದರು.

ಅಗ್ನಿ ಅವಘಡ ಸಂಭವಿಸಿದ್ದ ಸಂದರ್ಭ ಹುಕ್ಕಾವನ್ನು ಸೇದುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ವರದಿ ಹೇಳಿದೆ. ಪರದೆಗಳಿಗೆ , ಅಲಂಕಾರಿಕ ವಸ್ತುಗಳಿಗೆ ಹುಕ್ಕಾದ ಕಿಡಿ ತಗಲಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಎರಡು ರೆಸ್ಟೋರೆಂಟ್ ಗಳಿಗೂ ಮದ್ಯ ಹಾಗು ಹುಕ್ಕಾ ಮಾರಲು ಅವಕಾಶ ಇರಲಿಲ್ಲ.

ತುರ್ತು ನಿರ್ಗಮನ ದ್ವಾರ ಇದ್ದರೂ ಪಬ್ ಸಿಬ್ಬಂದಿ ಈ ಬಗ್ಗೆ ಅರಿತಿರಲಿಲ್ಲ. ಮದ್ಯದ ಕೆಗ್ ಗಳೂ ಕೂಡ ಈ ಅವಘಡಕ್ಕೆ ಮತ್ತೊಂದು ಕಾರಣವಾಗಿದೆ. ಕೆಗ್ ಗಳು ಜನರು ಪರಾರಿಯಾಗಲು ಅಡ್ಡಿಯಾಗಿತ್ತಲ್ಲದೆ, ಬೆಂಕಿ ತಗಲಿ ಸ್ಫೋಟಗೊಂಡಿತ್ತು. ಇದರಿಂದ ಬೆಂಕಿ ಮತ್ತಷ್ಟು ಹೆಚ್ಚಿತು ಎಂದು ವರದಿ ತಿಳಿಸಿದೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News