ಅತ್ತನೂರ: 'ಇಂಟರ್ನೆಟ್ ಸಾಥಿ' ತರಬೇತಿ ಕಾರ್ಯಕ್ರಮ

Update: 2018-01-06 16:04 GMT

ರಾಯಚೂರು, ಜ. 6: ಗೂಗಲ್ ಹಾಗೂ ಟಾಟಾ ಟ್ರಸ್ಟ್ ಸಹಯೋಗದಲ್ಲಿ 1 ಬ್ರಿಡ್ಜ್ ವತಿಯಿಂದ ಅಯೋಜಿಸಲಾದ "ಇಂಟರ್ನೆಟ್ ಸಾಥಿ" ತರಬೇತಿಯು ರಾಯಚೂರಿನ ಜಿಲ್ಲೆಯ ಅತ್ತನೂರಿನಲ್ಲಿ ನಡೆಯಿತು.

ಸುಮಾರು 16ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡ ಈ ತರಬೇತಿಯಲ್ಲಿ ಇಂಟರ್ನೆಟ್ ಅನ್ನು ಬಳಸಿಕೊಂಡು ಸಮುದಾಯದ ಬದಲಾವಣೆ ಹೇಗೆ ಎಂಬ ಬಗ್ಗೆ ಚರ್ಚೆ ನಡೆಯಿತು.

ಮಹಿಳೆಯರಿಗೆ ಮೊಬೈಲ್ ಹಾಗೂ ಇಂಟರ್ನೆಟ್ ಬಗ್ಗೆ ತರಬೇತಿ ನೀಡುವುದು. ಈ ಮೂಲಕ ಮಹಿಳಾ ಸಬಲೀಕರಣವನ್ನು ಮಾಡುವುದು ಯೋಜನೆಯ ಮೂಲ ಉದ್ದೇಶವಾಗಿದೆ. ತರಬೇತಿ ಪಡೆದ ಮಹಿಳೆಯರು ತಮ್ಮ ಹಳ್ಳಿಯ ಮಹಿಳೆಯರು ಇಂಟರ್ನೆಟ್ ಬಳಸುವಂತೆ ಹಾಗೂ ಇಂಟರ್ನೆಟ್ ಮೂಲಕ ದೊರೆಯುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ ಎನ್ನುತ್ತಾರೆ ಯೋಜನೆಯ ರಾಜ್ಯ ಮೇಲ್ವಿಚಾರಕ ಲಕ್ಷದೀಪ ಪೆಂಡೆಂಕರ್.

"ನನಗೆ ಇಂಟರ್ನೆಟ್ ಸಾಥಿ ಯೋಜನೆ ಮೂಲಕ ಇಂಟರ್ನೆಟ್ ಅನ್ನು ಬಳಸುವ ಅವಕಾಶ ದೊರೆಯಿತು. ಇಂಟರ್ನೆಟ್ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಸಾಧ್ಯವಾಗಿದ್ದು, ಗ್ರಾಮದ ಪ್ರತಿಯೊಬ್ಬ ಮಹಿಳೆಯರಿಗೆ ಇಂಟರ್ನೆಟ್ ಅಂದರೆ ಏನು ಹಾಗೂ ಅದರ ಬಳಕೆ ಬಗ್ಗೆ ನಾನು ತಿಳಿಸಲಿದ್ದೇನೆ ಎನ್ನುತ್ತಾರೆ ತರಬೇತಿ ಪಡೆದ  ಸೌಮ್ಯ.

ಈ ಸಂದರ್ಭ ತರಬೇತಿ ಪಡೆದ ಮಹಿಳೆಯರಿಗೆ ಮೊಬೈಲ್ ಹಾಗೂ ಟ್ಯಾಬ್ ಅನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News