ಪೊಲೀಸ್ ಹೆಡ್ ಕಾನ್ಸ್ ಟೇಬಲ್ ನಿಂದ ಫೇಸ್‍ಬುಕ್‍ನಲ್ಲಿ ಅಶ್ಲೀಲ ಸಂದೇಶ: ಠಾಣೆ ಎದುರೇ ಪ್ರತಿಭಟನೆ ನಡೆಸಿದ ಮಹಿಳೆ

Update: 2018-01-06 16:53 GMT

ಮೈಸೂರು,ಜ.6: ಮಹಿಳೆಯೋರ್ವಳಿಗೆ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಒಬ್ಬ ಫೇಸ್‍ಬುಕ್‍ನಲ್ಲಿ ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಮಹಿಳೆ, ದೂರು ನೀಡಿ ಠಾಣೆ ಎದುರೇ ಪ್ರತಿಭಟನೆ ನಡೆಸಿದ ಘಟನೆ ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮಹಿಳೆಯು ಮರಿಮಲ್ಲಪ್ಪ ಶಾಲೆಯ ಹತ್ತಿರ ಚಾಟ್ ಅಂಗಡಿ ನಡೆಸುತ್ತಿದ್ದಾರೆ. ಇವರು ಪ್ರಕರಣವೊಂದರ ಸಂಬಂಧ ದೂರು ನೀಡಲು ಈ ಹಿಂದೆ ಲಕ್ಷ್ಮಿಪುರಂ ಠಾಣೆಗೆ ಹೋದ ಸಂದರ್ಭದಲ್ಲಿ ಠಾಣೆಯ ಹೆಡ್ ಕಾನ್ಸ್‍ಟೇಬಲ್ ರಾಜು ಪರಿಚಯವಾಗಿದ್ದಾನೆ. ಇದೇ ಪರಿಚಯವನ್ನ ಫೇಸ್ ಬುಕ್ ಮೂಲಕ ಮುಂದುವರೆಸಿದ ರಾಜು ಮಹಿಳೆಗೆ ಅಶ್ಲೀಲವಾದ ಮೇಸೆಜ್ ಕಳುಹಿಸುತ್ತಿದ್ದ ಎನ್ನಲಾಗಿದೆ. 

ಈ ಬಗ್ಗೆ ನೊಂದ ಮಹಿಳೆ ಹಲವಾರು ಬಾರಿ ಫೋನ್ ಮಾಡಿ ಬೈದಿದ್ದರು ಎನ್ನಲಾಗಿದೆ. ಆದರೂ ಈತ ಫೇಸ್‍ಬುಕ್‍ನಲ್ಲಿ ಅಶ್ಲೀಲ ಮೆಸೇಜ್‍ಗಳನ್ನ ಹಾಕುತ್ತಿದ್ದ. ಇದರಿಂದ ಬೇಸತ್ತ ಈ ಮಹಿಳೆ, ಇಂದು ಹೆಡ್ ಕಾನ್ಸ್ ಟೇಬಲ್ ವಿರುದ್ಧ, ಆತ ಕರ್ತವ್ಯ ನಿರ್ವಹಿಸುವ ಲಕ್ಷ್ಮಿಪುರಂ ಠಾಣೆಯಲ್ಲೇ ದೂರು ನೀಡಿದ್ದಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಠಾಣೆ ಎದುರೇ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ ಪೆಕ್ಟರ್ ರಘು ಮಹಿಳೆಯ ದೂರು ಸ್ವೀಕರಿಸಿದರಲ್ಲದೆ, ಈ ಸಂಬಂಧ ತನಿಖೆ ನಡೆಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News