ಬೆಂಕಿಯಿಂದ ಅರಣ್ಯಜೀವಿಗಳ ರಕ್ಷಿಸಲು ಸಹಕರಿಸಿ : ಆರ್‌ಎಫ್‌ಒ ಪಾಠಣ್ಕರ್

Update: 2018-01-07 17:40 GMT

ಸಿದ್ದಾಪುರ(ಉ.ಕ) ಜ.7: ಇಂದು ಎಲ್ಲಾ ಕಡೆಗಳಲ್ಲಿ ಅರಣ್ಯಕ್ಕೆ ಬೆಂಕಿ ಬೀಳುತ್ತಿದ್ದು, ಮುಂದಿನ ಜನಾಂಗಕ್ಕೆ ಉತ್ತಮವಾದ ಪರಿಸರವನ್ನು ಉಳಿಸಬೇಕಾದರೆ ಅರಣ್ಯದ ರಕ್ಷಣೆಯಾಗಬೇಕು. ಬೆಂಕಿಯಿಂದ ಅರಣ್ಯವನ್ನು ಮತ್ತು ವನ್ಯಪ್ರಾಣಿಗಳನ್ನು ರಕ್ಷಿಸಬೇಕಾಗಿದೆ ಎಂದು ಆರ್‌ಎಫ್‌ಒ ಲೆಕೇಶ್ ಆರ್ ಪಾಠಣ್ಕರ್ ಹೇಳಿದ್ದಾರೆ.

ಅವರು ತಾಲೂಕಿನ ಕಾನಗೋಡ ಗ್ರಾಮ ಪಂಚಾಯತ್ ಬೆಳ್ಳಟ್ಟೆಯಲ್ಲಿ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ, ಆಧಾರ ಸಂಸ್ಥೆ ಸಿದ್ದಾಪುರ ಇವರ ಆಶ್ರಯದಲ್ಲಿ ಆಯೋಜಿಸಿದ್ದ ಬೆಂಕಿಯಿಂದ ಅರಣ್ಯ ಮತ್ತು ವನ್ಯ ಪ್ರಾಣಿಗಳ ರಕ್ಷಣೆಯ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.ಇಂದು ಕರಡದ ಬೇಣಾ ಮತ್ತು ತೋಟದ ತಲವಾರುಗಳಿಗೆ ಬೆಂಕಿ ಹಾಕಲಾಗುತ್ತದೆ. ಇನ್ಯಾವುದೋ ಕಾರಣಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದ ಅರಣ್ಯ ಮತ್ತು ವನ್ಯ ಜೀವಿಗಳು ನಾಶವಾಗುತ್ತದೆ. ಕಾರಣ ಬೆಂಕಿಯಿಂದ ರಕ್ಷಣೆಯನ್ನು ಮಾಡಬೇಕು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಅರಣ್ಯಕ್ಕೆ ಬೆಂಕಿ ಬಿದ್ದಾಗ ಆರಿಸಬೇಕು. ಇಲ್ಲವೇ ಅರಣ್ಯ ಇಲಾಖೆಗೆ ತಕ್ಷಣ ತಿಳಿಸಬೇಕು ಎಂದರು.

ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿದರು. ವಿಎಫ್‌ಸಿ ಅಧ್ಯಕ್ಷ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸದಸ್ಯರಾದ ಹೇರಂಬ ನಾಯ್ಕ, ಕೃಷ್ಣ ನಾಯ್ಕ, ವಿಜಯಲಕ್ಷ್ಮೀ ಬಿಳಗಿ, ಪಾರ್ವತಿ ಚನ್ನಯ್ಯ, ಸುಶೀಲಾ ಜೋಗಿ, ಚನ್ನಮ್ಮ ಎಸ್.ನಾಯ್ಕ ಉಪಸ್ಥಿತರಿದ್ದರು.

ಉಪವಲಯಾರಣ್ಯಾಧಿಕಾರಿ ಮಂಜುನಾಥಸ್ವಾಮಿ ಸ್ವಾಗತಿಸಿದರು. ಆಧಾರ ಸಂಸ್ಥೆಯ ಸಂಯೋಜಕ ಸುರೇಶ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಅರಣ್ಯ ರಕ್ಷಕ ವಿನಾಯಕ ಮಡಿವಾಳ ವಂದಿಸಿದರು. ನಂತರ ಗ್ರಾಮದಲ್ಲಿ ಬೆಂಕಿಯಿಂದ ಅರಣ್ಯ ಮತ್ತು ವನ್ಯ ಪ್ರಾಣಿಗಳ ರಕ್ಷಣೆಯ ಜಾಗೃತಿಯ ಜಾಥಾ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News