ಹನೂರು: ರಾಷ್ಟ್ರೀಯ ಯುವ ದಿನ ಆಚರಣೆ

Update: 2018-01-16 15:56 GMT

ಹನೂರು,ಲ.16 : ಹನೂರು ಸಮೀಪದ ಚಿಂಚಳ್ಳಿ ಗ್ರಾಮದಲ್ಲಿ ಬಸವ ಬಳಗ ಮತ್ತು ಚಿಂಚಳ್ಳಿ ಯುವ ಬ್ರಿಗೇಡ್ ಕಾರ್ಯಕರ್ತರ ಸಮ್ಮುಖದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು 

ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಲಂಕಾರ ಮಾಡಿದ ಸಿ.ಎಂ ರಾಜೇಂದ್ರಕುಮಾರ್ ಪೌಡೇಂಷನ್ ಸಂಸ್ಥಾಪಕರಾದ ಸಿ ಎಂ ರಾಜೇಂದ್ರಕುಮಾರ್, ಪ್ರಸಕ್ತ ವರ್ಷ ರಾಷ್ಟ್ರೀಯ ಯುವ ದಿನವನ್ನು ವಿದ್ಯಾರ್ಥಿಗಳು, ತಮ್ಮ ವ್ಯಕ್ತಿತ್ವ ವಿಕಸನ ಮತ್ತು ಭವ್ಯ ಭಾರತವನ್ನು ನಿರ್ಮಾಣ  ಮಾಡುವ ರೀತಿಯಲ್ಲಿ ಇತರರಿಗೆ ಮಾದರಿಯಾಗುವ ಹಾಗೆ ಜೀವನವನ್ನು ರೂಪಿಸಿಕೂಳ್ಳಬೇಕು ಎಂದರು.

ಪ್ರಬುದ್ದ ರಾಷ್ಟ್ರೀಯ ನಿರ್ಮಾಣ ಮಾಡುವಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ಹಿರಿದು. ಪ್ರತಿಯೊಬ್ಬರೂ ಅವರ ಜೀವನ ಧಾರೆಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೂಳ್ಳಬೇಕು. ಸ್ವಾಮಿ ವಿವೇಕಾನಂದರು ಇಡೀ ಪ್ರಪಂಚವೇ ನಮ್ಮ ಭಾರತ ದೇಶದ ಕಡೆ ಸೆಳೆಯುವಂತೆ ಮಾಡಿದ ಆಧ್ಯಾತ್ಮ ಚೇತನವಾಗಿದ್ದಾರೆ  ಎಂದರು.

ಇದೇ ಸಂದರ್ಭದಲ್ಲಿ ಪಾಳ್ಯ ಸುಂದರೇಶ್, ಬಂಡಳ್ಳಿ ಶಂಕರಪ್ಪ, ಪುರೂಷತ್ತಮ್, ಸಚಿನ್‍ದಿಕ್ಷಿತ್, ಮಲ್ಲೇಶ್, ಮಹದೇವಸ್ವಾಮಿ,ಪ್ರಭು, ಮಹೇಶ್ ನಾಗೇಂದ್ರ , ಮಂಜು ಇನ್ನಿತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News