10 ರೂಪಾಯಿ ನಾಣ್ಯದ ಎಲ್ಲಾ 14 ವಿನ್ಯಾಸಗಳು ಮಾನ್ಯ : ಆರ್‍ಬಿಐ ಸ್ಪಷ್ಟನೆ

Update: 2018-01-17 12:10 GMT

ಮುಂಬೈ,ಜ.17 : ಕೆಲವು ವರ್ತಕರು ಹತ್ತು ರೂಪಾಯಿ ನಾಣ್ಯಗಳನ್ನು ಸ್ವೀಕರಿಸಲು ಒಪ್ಪುತ್ತಿಲ್ಲ ಎಂಬ ದೂರುಗಳ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟೀಕರಣ ನೀಡಿ ಎಲ್ಲಾ 14 ವಿನ್ಯಾಸಗಳಲ್ಲಿರುವ ಹತ್ತು ರೂಪಾಯಿ ನಾಣ್ಯಗಳು ಮಾನ್ಯವಾಗಿದೆ ಎಂದು ಹೇಳಿದೆ.

ಎಲ್ಲಾ ನಾಣ್ಯಗಳೂ ಸರಕಾರದ ಟಂಕಸಾಲೆಯಲ್ಲಿಯೇ ತಯಾರಾಗುತ್ತವೆ ಹಾಗೂ ಪ್ರತಿಯೊಂದು ನಾಣ್ಯವು ದೇಶದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರಗಳನ್ನು ಹೊಂದಿರುತ್ತವೆ ಎಂದು ಆರ್‍ಬಿಐ ಹೇಳಿದೆ.

ಇಲ್ಲಿಯ ತನಕ ರಿಸರ್ವ್ ಬ್ಯಾಂಕ್ ಒಟ್ಟು 14 ವಿನ್ಯಾಸದ  ಹತ್ತು ರೂಪಾಯಿ ನಾಣ್ಯಗಳನ್ನು ಹೊರತಂದಿದೆ ಎಂದೂ ಆರ್‍ಬಿಐ ಹೇಳಿದೆಯಲ್ಲದೆ ಗ್ರಾಹಕರು ನೀಡುವ ಈ ನಾಣ್ಯಗಳನ್ನು ವಹಿವಾಟಿನ ಸಂದರ್ಭ ಸ್ವೀಕರಿಸುವಂತೆ ಬ್ಯಾಂಕುಗಳಿಗೂ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News