ನೋಟ್ ಬ್ಯಾನ್ ನಂತರ ನೋಟ್ ಚಲಾವಣೆ ಪ್ರಮಾಣ ಕಡಿಮೆಯಾಗಿದೆಯೇ ?

Update: 2018-01-22 16:22 GMT

ಹೊಸದಿಲ್ಲಿ, ಜ. 22: ಈ ವರ್ಷ ಜನವರಿ ವರೆಗೆ 17.2 ಲಕ್ಷ ಕೋಟಿ ರೂ. ನೋಟುಗಳು ಚಲಾವಣೆಗೊಂಡಿದ್ದು, ಕಳೆದ ವರ್ಷ ಇದೇ ಸಂದರ್ಭಕ್ಕೆ ಹೋಲಿಸಿದರೆ ಇದು ಶೇ. 81.5ರಷ್ಟು ಹೆಚ್ಚು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ದತ್ತಾಂಶ ತಿಳಿಸಿದೆ ಎಂದು bloombergquint.com ವರದಿ ಮಾಡಿದೆ.

 2016 ನವೆಂಬರ್ 8ರಂದು ನಗದು ನಿಷೇಧಿಸುವ ಮುನ್ನ ಶೇ. 97 ನೋಟುಗಳು ಚಲಾವಣೆಯಲ್ಲಿತ್ತು. ಈ ಸಂದರ್ಭ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳು 17.97 ಲಕ್ಷ ಕೋಟಿ ರೂ.

ಪ್ರಧಾನಿ ಮೋದಿ ನೋಟು ನಿಷೇಧಿಸಿದ ಬಳಿಕ ಶೇ. 86ರಷ್ಟು ನೋಟುಗಳು ಬ್ಯಾಂಕ್‌ಗಳಲ್ಲಿ ಜಮೆಯಾದವು. ನಗದು ನಿಷೇಧದ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಈ ನೋಟುಗಳ ಹೆಚ್ಚಳವು ಆರ್ಥಿಕತೆ, ಹಣದುಬ್ಬರ ಹಾಗೂ ಭೌತಿಕ ನಗದುಗಳಂತಹ ಸಾವಯವ ಅಂಶಗಳೊಂದಿಗೆ ಸಂಬಂಧ ಹೊಂದಿದೆ.

   ನಗದು ನಿಷೇಧದ ಮೊದಲಿನ ಸ್ಥಿತಿಗೆ ಹೋಲಿಸಿದರೆ, ಪ್ರಸಕ್ತ ನೋಟು ಚಲಾವಣೆ ಪ್ರಮಾಣ ಜಿಡಿಪಿ ಮಟ್ಟಕ್ಕಿಂತ ಕಡಿಮೆ ಇದೆ. ವರ್ಷಾಂತ್ಯ ಮಾರ್ಚ್‌ನಲ್ಲಿ ಜಿಡಿಪಿಯ ಶೇ. 10.4 ನೋಟುಗಳು ಚಲಾವಣೆಯಲ್ಲಿತ್ತು. ನೋಟು ನಿಷೇಧಕ್ಕಿಂತ ಮೊದಲು ಇದು ಶೇ. 12 ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News