ಶಾಲಾ ಬಸ್ ಚಾಲಕನಿಗೆ ಗುಂಡುಹಾರಿಸಿ ಬಾಲಕನ ಅಪಹರಣ

Update: 2018-01-25 09:44 GMT

ಹೊಸದಿಲ್ಲಿ, ಜ.25: ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪ್ರತಿಷ್ಠಿತ ಶಾಲಾ ಬಸ್‌ನ್ನು ತಡೆದು ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿರುವ ಆಘಾತಕಾರಿ ಘಟನೆ ಹಾಡಹಗಲೇ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಗಣರಾಜ್ಯೋತ್ಸವ ಹಾಗೂ ‘ಪದ್ಮಾವತ್’ ಚಿತ್ರ ಬಿಡುಗಡೆ ವಿವಾದದ ಹಿನ್ನೆಲೆಯಲ್ಲಿ ದಿಲ್ಲಿಯಾದ್ಯಂತ ಕಟ್ಟೆಚ್ಚರವಹಿಸಲಾಗಿದ್ದು ಈ ಮಧ್ಯೆ ಅಹಿತಕರ ಘಟನೆ ನಡೆದಿದೆ.

"ಗುರುವಾರ ಬೆಳಗ್ಗೆ 8 ಗಂಟೆಗೆ ಕಪ್ಪು ಹೆಲ್ಮೆಟ್ ಧರಿಸಿದ ಇಬ್ಬರು ದುಷ್ಕರ್ಮಿಗಳು ಶಾಲೆಯತ್ತ ತೆರಳುತ್ತಿದ್ದ ಬಸ್‌ನ್ನು ಅಡ್ಡಗಟ್ಟಲು ಯತ್ನಿಸಿದರು. ಚಾಲಕ ಇದಕ್ಕೆ ಪ್ರತಿರೋಧ ಒಡ್ಡಿದಾಗ ಆತನ ಮೇಲೆ ಗುಂಡು ಹಾರಾಟ ನಡೆಸಿದ ದುಷ್ಕರ್ಮಿಗಳು ಶಾಲಾ ಬಸ್‌ನೊಳಗೆ ಪ್ರವೇಶಿಸಿ ಅಕ್ಕನೊಂದಿಗೆ ಕುಳಿತ್ತಿದ್ದ ಬಾಲಕನನ್ನು ಅಪಹರಿಸಿದ್ದಾರೆ.ಬಸ್‌ನ ಒಳಗೆ 20 ವಿದ್ಯಾರ್ಥಿಗಳಿದ್ದರು. ಅಪಹರಣಕಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು ದಿಲ್ಲಿಯ ವಿಶೇಷ ಪೊಲೀಸ್ ತಂಡಗಳು ಘಟನೆಯ ತನಿಖೆ ನಡೆಸುತ್ತಿವೆ. ಬೆಳಗ್ಗೆ 10 ಗಂಟೆಯ ತನಕ ಅಪಹರಣಕಾರರಿಂದ ಯಾವುದೇ ಬೇಡಿಕೆ ಬಂದಿಲ್ಲ’’ ಎಂದು ಜಂಟಿ ಪೊಲೀಸ್ ಆಯುಕ್ತ ರವೀಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News