ರಾಜಸ್ಥಾನ: ಇಬ್ಬರು ಸೌದಿ ಪ್ರಜೆ ಸಹಿತ ಮೂವರ ಬಂಧನ

Update: 2018-01-26 14:08 GMT

ಜೈಪುರ, ಜ. 26: ಗಣರಾಜ್ಯೋತ್ಸವದ ದಿನವಾದ ಶುಕ್ರವಾರ ಸ್ಯಾಟ್ ಲೈಟ್ ಫೋನ್‌ಗಳನ್ನು ಹೊಂದಿದ ಇಬ್ಬರು ಸೌದಿ ಪ್ರಜೆಗಳು ಹಾಗೂ ಓರ್ವ ಭಾರತೀಯನನ್ನು ರಾಜಸ್ಥಾನದ ಪೋಖರಣ್ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಶಂಕಿತರನ್ನು ಸೌದಿ ಅರೇಬಿಯಾದ ಅಲ್ ತಲಾಲ್ ಮುಹಮ್ಮದ್ (40) ಹಾಗೂ ಅಲ್ ಸಮ್ರಿ ಮುಹಮ್ಮದ್ (40) ಎಂದು ಗುರುತಿಸಲಾಗಿದೆ. ಇನ್ನೋರ್ವ ಭಾರತೀಯನನ್ನು ಸೈಯದ್ ಮೊಹ್ಸಿನ್ (41) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜೈಸಲ್ಮಾರ್ ಜಿಲ್ಲೆಯ ಪೋಖರಣ್‌ನ ಹೊಟೇಲ್ ಒಂದರಿಂದ ಈ ಮೂವರನ್ನು ಬಂಧಿಸಲಾಯಿತು ಎಂದು ಜೈಸಲ್ಮಾರ್‌ನ ಪೊಲೀಸ್ ಅಧೀಕ್ಷಕ ಗೌರವ್ ಯಾದವ್ ಹೇಳಿದ್ದಾರೆ.

ಅವರಿಂದ ಸ್ಯಾಟ್ ಲೈಟ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಸೇನಾ ಬೇಹುಗಾರಿಕೆ ತಂಡ ಹಾಗೂ ಜೈಸಲ್ಮಾರ್ ಪೊಲೀಸರು ಜಂಟಿಯಾಗಿ ಅವರ ವಿಚಾರಣೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News