ವಿಜಯ್ ಕೇಶವ್ ಗೋಖಲೆ ನೂತನ ವಿದೇಶಾಂಗ ಕಾರ್ಯದರ್ಶಿ

Update: 2018-01-29 07:33 GMT

ಹೊಸದಿಲ್ಲಿ, ಜ.29:ಭಾರತದ  ನೂತನ ವಿದೇಶಾಂಗ ಕಾರ್ಯದರ್ಶಿ ಯಾಗಿ ವಿಜಯ್ ಕೇಶವ್ ಗೋಖಲೆ ಸೋಮವಾರ ಅಧಿಕಾರ ವಹಿಸಿಕೊಂಡರು.

1981 ಬ್ಯಾಚ್ ನ ಐಎಫ್ ಎಸ್ ಅಧಿಕಾರಿಯಾಗಿರುವ ವಿಜಯ್  ಕೇಶವ್ ಅವರು ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯದರ್ಶಿ (ಆರ್ಥಿಕ ವ್ಯವಹಾರ )ಯಾಗಿ ಸೇವೆ ಸಲ್ಲಿಸಿದ್ದರು.

 ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಎಸ್.ಜಯಶಂಕರ್ ಸೇವೆಯಿಂದ ಸೋಮವಾರ ಸೇವೆಯಿಂದ ನಿವೃತ್ತರಾಗಿದ್ದಾರೆ.ತೆರವಾಗಿರುವ ಸ್ಥಾನಕ್ಕೆ ವಿಜಯ್ ಕೇಶವ್ ಗೋಖಲೆ ನೇಮಕಗೊಂಡಿದ್ದಾರೆ.

ಕಳೆದ ವರ್ಷ ಭಾರತ ಮತ್ತು ಚೀನಾ ಗಡಿಯ ಡೋಕ್ಲಾಮ್ ನಲ್ಲಿ  73 ದಿನಗಳ ಕಾಲ ಕಂಡು ಬಂದಿದ್ದ  ಸಮರದ ವಾತಾವರಣವನ್ನು ತಿಳಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ವಾಪಸಾಗುವ ಮೊದಲು ವಿಜಯ್ ಕೇಶವ್ ಅವರು 2016, ಜ.26ರಿಂದ 2017, ಅ.21ರ ತನಕ ಚೀನಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News