ಉತ್ತರ ಭಾರತದ ಹಲವೆಡೆ ಭೂಕಂಪ

Update: 2018-01-31 07:55 GMT

ಹೊಸದಿಲ್ಲಿ, ಜ.31: ಉತ್ತರ ಭಾರತದ  ಹಲವೆಡೆ ಬುಧವಾರ  ಮಧ್ಯಾಹ್ನ 12:37ರ ಹೊತ್ತಿಗೆ ಲಘು ಭೂಕಂಪ  ಉಂಟಾಗಿದೆ.

ದಿಲ್ಲಿ, ಎನ್ ಸಿಆರ್, ಪಂಜಾಬ್, ಹರಿಯಾಣ , ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಪಠಾಣ್ ಕೋಟ್ , ಫರೀದ್ ಕೋಟ್, ಪೂಂಚ್ ನಲ್ಲಿ  ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲೂ ಭೂಕಂಪನವಾಗಿರುವ  ಬಗ್ಗೆ ವರದಿಯಾಗಿದೆ.

ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ವರದಿಯಾಗಿಲ್ಲ. ಉತ್ತರ ಪ್ರದೇಶದಲ್ಲಿ 10ರಿಂದ 12 ಸೆಕೆಂಡ್ ತನಕ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿದೆ.

ಅಫ್ಘಾನಿಸ್ತಾನದ ಹಿಂದೂ ಕುಷ್ ಪರ್ವತ ಶ್ರೇಣಿಯಲ್ಲಿ ಭೂಮಿಯಿಂದ 186.86  ಕಿ.ಮೀ  ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ.  ಇದರ ಪರಿಣಾಮವಾಗಿ ಉತ್ತರ ಭಾರತದಲ್ಲಿ ಭೂಮಿ ಕಂಪಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News