ಬ್ಯಾಂಕ್ ಅಧಿಕಾರಿ ಎಂದು ಕರೆಮಾಡಿ ಎಟಿಎಂ ಪಿನ್ ಪಡೆದು ನಗದು ವಂಚನೆ

Update: 2018-02-01 16:31 GMT

ಮಡಿಕೇರಿ,ಫೆ.1 : ದೂರವಾಣಿ ಮೂಲಕ ಎಟಿಎಂ ಪಿನ್ ಪಡೆದು 3,45,900 ರೂ.ಗಳನ್ನು ಡ್ರಾ ಮಾಡಿ ವಂಚಿಸಿರುವ ಪ್ರಕರಣದ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಡಿಕೇರಿ ನಗರದ ಸಂಪಿಕೆಕಟ್ಟೆ ನಿವಾಸಿ ಎಂ.ಪಿ.ಯೋಗಾನಂದ ಎಂಬವವರಿಗೆ ಅಪರಿಚಿತ ವ್ಯಕ್ತಿಯೋರ್ವ ದೂರವಾಣಿ ಮೂಲಕ ಕರೆ ಮಾಡಿ, ತಾನು ಎಸ್.ಬಿ.ಐ ಬ್ಯಾಂಕಿನ ಅಧಿಕಾರಿ ಎಂದು ಹೇಳಿ ಎಟಿಎಂ ಪಿನ್ ಪಡೆದುಕೊಂಡಿದ್ದಾರೆ. ನಂತರ ಬ್ಯಾಂಕ್ ಖಾತೆಯಿಂದ ಜ.20 ರಿಂದ 26 ರ ಅವಧಿಯಲ್ಲಿ 3,45,900 ರೂ.ಗಳನ್ನು ಡ್ರಾ ಮಾಡಿ ವಂಚಿಸಿದ್ದಾಗಿ ಪ್ರಕರಣ ದಾಖಲಾಗಿದೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News