ಮುಸ್ಲಿಮರು ಭಾರತದಲ್ಲಿರಬಾರದು, ಅವರು ಪಾಕಿಸ್ತಾನ-ಬಾಂಗ್ಲಾದೇಶಕ್ಕೆ ಹೋಗಲಿ

Update: 2018-02-07 07:50 GMT

ಹೊಸದಿಲ್ಲಿ, ಫೆ.7: "ಮುಸ್ಲಿಮರು ಈ ದೇಶದಲ್ಲಿ ಬಾಳಬಾರದು. ಅವರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಬೇಕು'' ಎಂದು  ಬಿಜೆಪಿ ಸಂಸದ ವಿನಯ್ ಕಟಿಯಾರ್ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

"ವಂದೇ ಮಾತರಂ ಹಾಡಿಗೆ ಗೌರವ ನೀಡದವರನ್ನು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರನ್ನು ಅಥವಾ ಪಾಕಿಸ್ತಾನದ ಧ್ವಜ ಹಾರಿಸಿದವರನ್ನು ಶಿಕ್ಷಿಸಲು ಅನುವು ಮಾಡಿಜೊಡುವ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸಬೇಕು'' ಎಂದೂ ಕಟಿಯಾರ್ ಹೇಳಿದ್ದಾರೆ.

ಭಾರತೀಯ ಮುಸ್ಲಿಮರನ್ನು 'ಪಾಕಿಸ್ತಾನಿ' ಎಂದು ಕರೆಯುವ ಯಾರನ್ನೇ ಆದರೂ ಶಿಕ್ಷಿಸಲು ಅನುವು ಮಾಡಿಕೊಡುವ ಕಾನೂನನ್ನು ರಚಿಸಬೇಕೆಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಹೇಳಿಕೆಗೆ ಪ್ರತಿಯಾಗಿ ಕಟಿಯಾರ್ ಮೇಲಿನ ಹೇಳಿಕೆ ನೀಡಿದ್ದಾರೆ.

"ಮುಸ್ಲಿಮರು ದೇಶವನ್ನು ಧಾರ್ಮಿಕ ತಳಹದಿಯಲ್ಲಿ ವಿಭಜಿಸಿದ್ದಾರೆ. ಈ ದೇಶವನ್ನು ವಿಭಜಿಸಿದವರು ಮುಸ್ಲಿಮರಾಗಿರುವುದರಿಂದ  ಅವರೇಕೆ ಇಲ್ಲಿ ಇರಬೇಕು?, ಅವರಿಗೆ ಪ್ರತ್ಯೇಕ ಸ್ಥಳ ನೀಡಲಾಗಿದೆ. ಅವರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಲಿ. ಇಲ್ಲಿ ಅವರಿಗೇನು ಕೆಲಸ?'' ಎಂದು ಕಟಿಯಾರ್ ಪ್ರಶ್ನಿಸಿದ್ದಾರೆ.

"ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳ ನಂತರವೂ ನನ್ನನ್ನು 'ಪಾಕಿಸ್ತಾನಿ' ಎಂದು ಕರೆಯಲಾಗುತ್ತಿದೆ. ಏಕೆ ? ನಾವು ಜಿನ್ನಾ ಆಹ್ವಾನವನ್ನು ತಿರಸ್ಕರಿಸಿದ್ದೆವು. ಈಗ ನನ್ನಿಚ್ಛೆಯಂತೆ ತ್ರಿವರ್ಣ ಧ್ವಜವನ್ನೂ ಹಾರಿಸಲು ನನಗಾಗುತ್ತಿಲ್ಲ. ಪರಿಶಿಷ್ಟ/ಜಾತಿಗಳವರಿಗಿರುವಂತೆ  ನಮಗೂ ಒಂದು ಕಾನೂನು ಏಕಿರಬಾರದು?'' ಎಂದು ಉವೈಸಿ ಕೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News