ಮಹಾವೀರರ ತತ್ವ, ಆದರ್ಶಗಳು ಇಂದಿನ ಜನತೆಗೆ ಅಗತ್ಯವಾಗಿದೆ: ಉಮಾಶ್ರೀ

Update: 2018-02-08 13:09 GMT

ಶ್ರವಣಬೆಳಗೊಳ,ಫೆ.08: ಸತ್ಯ, ಅಹಿಂಸೆ ಮತ್ತು ತ್ಯಾಗವನ್ನು ನಾಡಿಗೆ ಸಾರಿದ ಮಹಾವೀರರ ತತ್ವ ಮತ್ತು ಆದರ್ಶಗಳು ಇಂದಿನ ಜನತೆಗೆ ಅಗತ್ಯವಾಗಿದ್ದು, ಅವುಗಳನ್ನು ಪಾಲನೆ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕರತಿ ಖಾತೆ ಸಚಿವೆ ಉಮಾಶ್ರೀ ಹೇಳಿದರು.

ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯ ಯಾವುದರ ಬಗ್ಗೆಯೂ ಅತಿಯಾದ ವ್ಯಾಮೋಹ ಇಡದೇ, ತ್ಯಾಗ, ಅಹಿಂಸೆ ಮತ್ತು ಸತ್ಯದಲ್ಲಿ ನಡೆಯುತ್ತಾ, ಭಗವಾನ್ ಮಹಾವೀರರ ಆದರ್ಶಗಳನ್ನು ಪಾಲನೆ ಮಾಡುವತ್ತ ಮುಂದಾಗಬೇಕು ಎಂದು ತಿಳಿಸಿದರು.

ಮಹಾವೀರರು ಒಂದು ಧರ್ಮ ಮತ್ತು ಜಾತಿಗೆ ಸೀಮಿತವಾಗದೆ ವಿಶ್ವಕ್ಕೆ ಶಾಂತಿ ಮತ್ತು ಅಹಿಂಸಾ ಮಾರ್ಗವನ್ನು ಅನುಸರಿಸುವಂತೆ ಸಾರಿದ ಮಹಾನ್ ವ್ಯಕ್ಯಿಯಾಗಿದ್ದು, ಇಂದಿನ ಪರಿಸ್ಥಿಗೆ ಅವರ ಆದರ್ಶಗಳು ಅಗತ್ಯವಿದೆ ಎಂದು ತಿಳಿಸಿದರು. ಹಿಂಸೆ, ಕ್ರೌರ್ಯಗಳು ಮಾನವೀಯತೆಯನ್ನು ಮರೆಸುತ್ತಿರುವ ದಿನಗಳಲ್ಲಿ ಜೈನ ಧರ್ಮದ ಅಹಿಂಸಾ ಮತ್ತು ತ್ಯಾಗದ ಮಾರ್ಗಗಳು ಇಂದಿನ ಜನತೆಗೆ ಅಗತ್ಯವಿದೆ ಎಂದು ತಿಳಿಸಿದರು.

ಶ್ರಿ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಧಿಸಿ, ಸಂಗೀತ ಎಲ್ಲಾ ವರ್ಗದ ಜನತೆಯನ್ನು ಆಕರ್ಷಿಸುತ್ತದೆ. ಇದನ್ನು ಆಲಿಸುವುದರಿಂದ ಮನಸ್ಸಿನಲ್ಲಿನ ಬೇಸರ ದೂರವಾಗುತ್ತದೆ ಎಂದು ತಿಳಿಸಿದರು. ಹಿಂದಿನಂದಲೂ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಾ ಬಂದಿದ್ದು, ಇದರಿಂದ ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವ ಭಕ್ತರು ರಸಸಂಜೆಯಲ್ಲಿ ಪಾಲ್ಗೊಲ್ಲುತ್ತಾರೆ ಮತ್ತು ಇದರ ಸವಿನೆನಪು ಜೀವನದಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.

ಮಹಾಮಸ್ತಕಾಭಿಷೆಕ ವೀಕ್ಷಣೆಗೆ ಬರುವ ಭಕ್ತರಿಗಾಗಿ ಶ್ರೀ ಕ್ಷೇತ್ರದ ಎಲ್ಲಡೆಗಳಲ್ಲಿ ದಾಸೋಹದ ವ್ಯವಸ್ಥೆ ಮಾಡಿದ್ದು, ಭಕ್ತರಿಗೆ ಯಾವುದೇ ಕೊರತೆ  ಉಂಟಾಗಬಾರದು ಎಂಬುದು ತಮ್ಮ ಹಂಬಲವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ನಂತರ ಹಾಸ್ಯ ಕಲಾವಿದ ಪ್ರೋ.ಕೃಷ್ಣೇಗೌಡ, ಮೈಸೂರಿನ ವಿಜಯ್ ಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.

ಸಾಂಸ್ಕೃತಿಕ ಕಾರ್ಯಕ್ರಮ: ಮಹಾಮಸ್ತಕಾಭಿಷೇಕದ ಮಹೋತ್ಸವದ ಅಂಗವಾಗಿ ಕ್ಷೇತ್ರದ ಸಾಂಸ್ಕೃತಿಕ ವೇದಿಕೆಯಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಮೈಸೂರಿನ ವಿಜಯ ಪ್ರಕಾಶ್ ಅವರ ತಂಡದ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಬಾಹುಬಲಿ ಸ್ವಾಮಿ ಶಾಂತಿಯ ಮೂರುತಿ ನವಿಪೆವೂ ಅನುದಿನವೂ ಸೇರಿದಂತೆ ಬಾಹುಬಲಿ ಕುರಿತ ಹಲವು ಗೀತೆಗಳು ಹಾಡಲಾಯಿತು. ಇದಕ್ಕೂ ಮುನ್ನಾ ಹಾಸ್ಯ ಕಲಾವಿದ ಕೃಷ್ಣೆಗೌಡ ತಮ್ಮ ಹಾಸ್ಯ ಚಟಾಕಿಗಳ ಮೂಲಕ ರಂಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News