ಅಗತ್ಯಕ್ಕೆ ತಕ್ಕಷ್ಟು ಮನಃಶಾಸ್ತ್ರಜ್ಞರ ನೇಮಕವಾಗಿಲ್ಲ: ಸರಕಾರ

Update: 2018-02-10 17:49 GMT

ಹೊಸದಿಲ್ಲಿ, ಫೆ.10: ದೇಶದಲ್ಲಿ 20,250 ಮನಃಶಾಸ್ತ್ರಜ್ಞರ ಅಗತ್ಯವಿದ್ದು ಕೇವಲ 898 ಮನಃಶಾಸ್ತ್ರಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ 37,000 ಮನೋವೈದ್ಯಕೀಯ ಸಮಾಜ ಸೇವಾಕರ್ತರ ಅಗತ್ಯವಿದ್ದು ಕೇವಲ 900 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸರಕಾರ ತಿಳಿಸಿದೆ.

ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಸಚಿವೆ ಅನುಪ್ರಿಯಾ ಪಟೇಲ್, 2015ರ ಜನವರಿ ಅಂತ್ಯದಲ್ಲಿ ದೇಶದಲ್ಲಿ 3,827 ಮನೋವೈದ್ಯಕೀಯ ತಜ್ಞರು ಕಾರ್ಯನಿರ್ವಹಿಸುತ್ತಿದ್ದು 13,500 ಮನೋವೈದ್ಯಕೀಯ ತಜ್ಞರ ಅಗತ್ಯವಿದೆ . ಅಲ್ಲದೆ 3,000 ಮನೋವೈದ್ಯಕೀಯ ನರ್ಸ್‌ಗಳಿರಬೇಕಿದ್ದಲ್ಲಿ ಕೇವಲ 1,500 ಮಂದಿ ಇದ್ದಾರೆ. 2011ರ ಗಣತಿ ಪ್ರಕಾರ ದೇಶದಾದ್ಯಂತ 7.22 ಲಕ್ಷ ಜನತೆ ‘ಮಾನಸಿಕ ಕಾಯಿಲೆ’ಯಿಂದ ಬಳಲುತ್ತಿದ್ದರೆ, 15 ಲಕ್ಷಕ್ಕೂ ಹೆಚ್ಚು ಮಂದಿ ‘ಮಂದ ಬುದ್ಧಿ’ ಯವರಿದ್ದಾರೆ ಎಂದು ಸಚಿವೆ ತಿಳಿಸಿದರು. ಉತ್ತರಪ್ರದೇಶದಲ್ಲಿ ಮಾನಸಿಕ ಕಾಯಿಲೆಗೆ ಒಳಗಾದವರು ಅತ್ಯಧಿಕ ಸಂಖ್ಯೆ(76,603)ಯಲ್ಲಿದ್ದರೆ, ಪ.ಬಂಗಾಲದಲ್ಲಿ 71,515, ಕೇರಳದಲ್ಲಿ 66,915 ಹಾಗೂ ಮಹಾರಾಷ್ಟ್ರದಲ್ಲಿ 58,753 ಮಂದಿಯಿದ್ದಾರೆ ಎಂದು ಸಚಿವೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News