ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದವರು ನೋಟು ನೋಡಿ ಹೌಹಾರಿದ್ದೇಕೆ?

Update: 2018-02-11 14:42 GMT

ಹೊಸದಿಲ್ಲಿ, ಫೆ.11: ಎಟಿಎಂ ಒಂದರಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಇಬ್ಬರು ವ್ಯಕ್ತಿಗಳು ಎಟಿಎಂ ನೀಡಿದ ನೋಟನ್ನು ನೋಡಿ ಒಂದು ಕ್ಷಣ ಹೌಹಾರಿದ್ದಾರೆ. ಇದಕ್ಕೆ ಕಾರಣ ಎಟಿಎಂನಿಂದ ಬಂದದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೋಟಲ್ಲ. ಬದಲಾಗಿ, ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾದ ನೋಟುಗಳು.

ಈ ಘಟನೆ ನಡೆದದ್ದು ಕಾನ್ಪುರದಲ್ಲಿ. ನೋಟು ಅಮಾನ್ಯದ ನಂತರ ಇಂತಹ ಹಲವು ಘಟನೆಗಳು ನಡೆದಿವೆ. ಕಾನ್ಪುರದ ಮಾರ್ಬಲ್ ಮಾರ್ಕೆಟ್ ಬಳಿಯಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಗ್ರಾಹಕರಿಗೆ ಈ ನೋಟುಗಳು ಲಭಿಸಿವೆ.

ಇಬ್ಬರು 10 ಸಾವಿರ ರೂ. ಮತ್ತು ಇನ್ನೊಬ್ಬರು 20 ಸಾವಿರ ರೂ. ತೆಗೆಯಲು ಎಟಿಎಂಗೆ ತೆರಳಿದ್ದು, ಎಟಿಎಂನಿಂದ ಬಂದ ನೋಟುಗಳಲ್ಲಿ ತಲಾ ಒಂದು ನೋಟು ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ದ್ದಾಗಿದೆ.

ಈ ಘಟನೆಯ ನಂತರ ಎಟಿಎಂನ್ನು ಮುಚ್ಚಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಾನ್ಪುರ ಎಸ್ಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News