ದಾವಣಗೆರೆ ಜಿಲ್ಲಾ ವಿಧಾನಸಭಾ ಆಕಾಂಕ್ಷಿಗಳ ಸಭೆ

Update: 2018-02-12 04:15 GMT

ದಾವಣಗೆರೆ,ಫೆ.11: ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪತಾಕೆಯನ್ನು ಹಾರಿಸಬೇಕು ಎಂದು ಮಾಜಿ ಸಭಾಪತಿ, ಚುನಾವಣಾ ವೀಕ್ಷಕ ಡೆವೀಡ್ ಸಿಮೆಯೋನ್ ಕಾರ್ಯಕರ್ತರಿಗೆ ಕರೆ ನೀಡಿದರು.

ರವಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ ವಿಧಾನಸಭಾ ಆಕಾಂಕ್ಷಿಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಪೈಪೋಟಿ ಇದೆ. ಉಳಿದಂತೆ ಜೆಡಿಎಸ್ ಬಿಎಸ್‍ಪಿ ಜೊತೆ ಮೈತ್ರಿಯೊಂದಿಗೆ ಕಣಕ್ಕಿಳಿಯಲಿದೆ. ಆದರೆ, ನಮಗೆ ಬಿಜೆಪಿಯೇ ನೇರ ಸ್ಪರ್ಧಿ. ಆದ್ದರಿಂದ ಮುಂಬರುವ ಚುನಾವಣೆಯನ್ನು ಹೇಗೆ ಎದುರಿಸಿ ಜಯಶೀಲಾರಾಗಬೇಕೆಂಬ ಅರಿವು ಕಾರ್ಯಕರ್ತರಿಗಿರಬೇಕು ಎಂದ ಅವರು, ಈಗಾಗಲೇ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಮೂಲಕ 1.10 ಕೋಟಿ ಜನರನ್ನು ಕಾಂಗ್ರೆಸ್ ಕಾರ್ಯಕರ್ತರು ತಲುಪಿದ್ದಾರೆ. ಇದಕ್ಕಾಗಿ ಅನೇಕ ಕಮಿಟಿ ರಚಿಸಿ, ನೂತನ ಪದಾಧಿಕಾರಿಗಳನ್ನು ನೇಮಿಸಿದ್ದು, ಹೊಸ ಕಾರ್ಯತಂತ್ರ ರೂಪಿಸುವ ಬಗ್ಗೆ ತರಬೇತಿ ಸಹ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕ ಎಸ್. ರವಿ  ಮಾತನಾಡಿ, ಇಡೀ ರಾಷ್ಟ್ರದಲ್ಲಿ ಚುನಾವಣೆಗೂ ಮೊದಲು ನೀಡಿದ್ದ ಪ್ರನಾಳಿಕೆಯ ಶೇ. 90ರಷ್ಟು ಭರವಸೆಗಳನ್ನು ಈಡೇರಿಸಿರುವ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಇಡೀ ರಾಷ್ಟ್ರವೇ ಹೆಮ್ಮೆಪಡುವ, ಕೊಂಡಾಡುವ ಸರ್ಕಾರ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರ ನಮ್ಮದು ಎಂದು ಹೇಳಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆ, ಯೋಜನೆ ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆ, ಯೋಜನೆಗಳನ್ನು ಜನತೆ ಅರಿಯಬೇಕು. ಬಿಜೆಪಿ ಅಧಿಕಾರದಲ್ಲಿದ್ದಾಗ ಜೈಲು ಪಾಲಾದವರೆ ಹೆಚ್ಚು ಎಂದರು. 

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಪ್ರಾಸ್ಥಾವಿಕ ಮಾತನಾಡಿ, ಪಕ್ಷದಲ್ಲಿ ಅನೇಕರು ಬೆಂಗಳೂರು ಮಟ್ಟದಲ್ಲಿ ಟಿಕೆಟ್‍ಗಾಗಿ ಲಾಬಿ ಮಾಡುತ್ತಿದ್ದಾರೆ. ಆದ್ದರಿಂದ ವೀಕ್ಷಕರು ಅದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಸ್ಥಳೀಯ ನಾಯಕತ್ವವನ್ನು ಗುರುತಿಸಿ ಟಿಕೆಟ್ ನೀಡಲು ವರಿಷ್ಠರಿಗೆ ವರದಿ ಸಲ್ಲಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ವಿಪ ಸದಸ್ಯ ಅಬ್ದುಲ್ ಜಬ್ಬಾರ್, ಶಾಸಕ ಶಾಂತನಗೌಡ ಮತ್ತಿತರರಿದ್ದರು. ದಿನೇಶ್ ಶೆಟ್ಟಿ ಸ್ವಾಗತಿಸಿದರು. ಎಸ್. ಮಲ್ಲಿಕಾರ್ಜುನ ನಿರೂಪಿಸಿದರು. ನಾಗರಾಜ್ ವಂದಿಸಿದರು.

ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳ ಪಟ್ಟಿ:
ಮಾಯಕೊಂಡ : ಬಿ.ಎಚ್.ವೀರಭದ್ರಪ್ಪ, ಡಿ.ಬಸವರಾಜ್, ವೈ.ರಾಮಪ್ಪ, ಬಿ.ಟಿ.ವಿಶ್ವನಾಥ್, ನಂಜಾನಾಯ್ಕ, ಡಿ.ತಿಪ್ಪಣ್ಣ, ಎಸ್.ಎನ್.ಬಾಲಾಜಿ, ನಾಗರಾಜನಾಯ್ಕ, ಈರಾನಾಯ್ಕ, ರಾಘವೇಂದ್ರ ನಾಯ್ಕ, ಓ.ನಾಗೇಂದ್ರಪ್ಪ, ಬಸವಂತಪ್ಪ, ಪಿ.ಜಿ.ಚಂದ್ರಶೇಖರ್.

ಹರಿಹರ ; ಮರಿಯೋಜಿರಾವ್, ಡಾ.ಶೈಲೇಶ್ ಕುಮಾರ್, ಬಿ.ರೇವಣಸಿದ್ದಪ್ಪ, ಎಂ.ನಾಗೇಂದ್ರಪ್ಪ, ಎಚ್.ಮಹೇಶ್ವರಪ್ಪ, ಸೈಯದ್ ಓಜಾಜ್, ರಾಮಚಂದ್ರ ಕಲಾಲ್, ಟಿ.ಎಚ್.ಬಸವರಾಜ್, ಎಸ್.ರಾಮಪ್ಪ, ಕೆ.ಎನ್.ವೀರಣ್ಣ.

ಚನ್ನಗಿರಿ: ವಡ್ನಾಳ್ ರಾಜಣ್ಣ, ಸೈಯದ್ ಖಾಲಿದ್ ಅಹ್ಮದ್, ಯಾಹ್ಯೂಖಾನ್

ಹೊನ್ನಾಳಿ : ಡಿ.ಜಿ.ಶಾಂತನಗೌಡ, ಎಚ್.ಬಿ.ಮಂಜಪ್ಪ, ಬಿ.ಸಿದ್ದಪ್ಪ, ಎಚ್.ಎ.ಉಮಾಪತಿ.

ದಾವಣಗೆರೆ ದಕ್ಷಿಣ : ಡಾ.ಶಾಮನೂರು ಶಿವಶಂಕರಪ್ಪ, ಸಾಧಿಕ್ ಪೈಲ್ವಾನ್, ಕೆಂಗೋ ಹನುಮಂತಪ್ಪ, ಸೈಯದ್ ಸೈಪುಲ್ಲಾ.

ದಾವಣಗೆರೆ ಉತ್ತರ : ಎಸ್.ಎಸ್.ಮಲ್ಲಿಕಾರ್ಜುನ್.

ಹರಪನಹಳ್ಳಿ : ಎಂ.ಪಿ.ರವೀಂದ್ರ, ಸಿ.ಚಂದ್ರಶೇಖರ್ ಭಟ್, ಎಂ.ರಾಜಶೇಖರ್, ಡಾ.ಉಮೇಶ್ ಬಾಬು, ಎಂ.ಟಿ.ಸುಭಾಷ್ ಚಂದ್ರ. 

ಜಗಳೂರು : ಶಾಸಕ ಎಚ್.ಪಿ.ರಾಜೇಶ್, ಪುಷ್ಪಾ ಲಕ್ಷ್ಮಣಸ್ವಾಮಿ, ಪಿ.ಎಚ್.ಓಬಪ್ಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News