ನೆಹರೂರನ್ನು ಟೀಕಿಸಿದ ಪ್ರಧಾನಿಗೆ ರಾಜ್ ನಾಥ್ ಸಿಂಗ್ ವೀಡಿಯೋ ಮೂಲಕ ರಾಹುಲ್ ತಿರುಗೇಟು

Update: 2018-02-12 09:56 GMT

ಹೊಸದಿಲ್ಲಿ, ಫೆ.12: ನೆಹರೂ ಕುಟುಂಬದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ ಕೆಲ ದಿನಗಳ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ನೆಹರೂರನ್ನು ಹೊಗಳುವ ರಾಜ್ ನಾಥ್ ಸಿಂಗ್ ರ ವಿಡಿಯೋ ಪೋಸ್ಟ್ ಮಾಡಿ, “ಸತ್ಯ ಮಾತನಾಡಿದ್ದಕ್ಕಾಗಿ ಬಿಜೆಪಿ ನಾಯಕನಿಗೆ ಧನ್ಯವಾದ” ಎಂದು ಟ್ವೀಟ್ ಮಾಡಿದ್ದಾರೆ.

2015ರಲ್ಲಿ ನೆಹರೂ ಜನ್ಮ ದಿನಾಚರಣೆಯ ಸಂದರ್ಭ ರಾಜ್ ನಾಥ್ ಸಿಂಗ್ ರ ಭಾಷಣದ ವಿಡಿಯೋವನ್ನು ರಾಹುಲ್ ಪೋಸ್ಟ್ ಮಾಡಿದ್ದು, “ರಾಜ್ ನಾಥ್ ಸಿಂಗ್ ಜಿ ಸತ್ಯ ಮಾತನಾಡಿದ್ದಕ್ಕಾಗಿ ಧನ್ಯವಾದಗಳು. ಸತ್ಯಮೇವ ಜಯತೆ” ಟ್ವೀಟ್ ಮಾಡಿದ್ದಾರೆ.

2015ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜ್ ನಾಥ್ ಸಿಂಗ್, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ನಾಯಕರಲ್ಲಿ ನೆಹರೂ ಕೂಡ ಒಬ್ಬರು ಹಾಗು ಪ್ರಜಾಪ್ರಭುತ್ವವನ್ನು ಬಲಪಡಿಸಿದವರು ಎಂದಿದ್ದರು.

ನೆಹರೂ ಅವರ ಕಾಲದಲ್ಲಿ ಹಲವು ಅಭಿವೃದ್ಧಿಗೊಂಡ ದೇಶಗಳು ಅವರ ಬಗ್ಗೆ ಬರೆದಿತ್ತು ಹಾಗು ಚರ್ಚಿಸಿತ್ತು ಎಂದು ರಾಜ್ ನಾಥ್ ಭಾಷಣದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News