ತಮಿಳುನಾಡು ವಿಧಾನಸೌಧದಲ್ಲಿ ಜಯಲಲಿತಾ ಭಾವಚಿತ್ರ: ಹೈಕೋರ್ಟ್ ಮೆಟ್ಟಿಲೇರಿದ ಡಿಎಂಕೆ

Update: 2018-02-12 10:15 GMT

ಚೆನ್ನೈ, ಫೆ.12: ತಮಿಳುನಾಡಿನ ವಿಧಾನಸೌಧದ ಹಾಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಏಳಡಿ ಎತ್ತರದ ಭಾವಚಿತ್ರವನ್ನು ಸೋಮವಾರ ಸ್ಪೀಕರ್ ಧನಪಾಲ್ ಅನಾವರಣಗೊಳಿಸಿದರು.ಆದರೆ, ರಾಜ್ಯ ಸರಕಾರದ ಈ ಕ್ರಮವನ್ನು ಖಂಡಿಸಿರುವ ವಿಪಕ್ಷ ಡಿಎಂಕೆ, ಸುಪ್ರೀಂಕೋರ್ಟಿನಿಂದ ಭ್ರಷ್ಟಾಚಾರ ಆರೋಪದಲ್ಲಿ ತಪ್ಪಿತಸ್ಥರಾಗಿದ್ದ ಜಯಲಲಿತಾರ ಭಾವಚಿತ್ರವನ್ನು ತೆರವುಗೊಳಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.

ಜಸ್ಟಿಸ್ ಇಂದಿರಾ ಬ್ಯಾನರ್ಜಿ ಹಾಗೂ ಜಸ್ಟಿಸ್ ಅಬ್ದುಲ್ ಖುದ್ದೊಸ್ ಅವರಿದ್ದ ಮೊದಲ ಪೀಠ ಬೆಳಗ್ಗೆ 10:30ಕ್ಕೆ ತಮ್ಮ ಪ್ರಕ್ರಿಯೆಯನ್ನು ಆರಂಭಿಸಿತು. ಈ ವೇಳೆ ಹಾಜರಿದ್ದ ಡಿಎಂಕೆ ಹಿರಿಯ ವಕೀಲ ವಿಲ್ಸನ್, ತಾವು ಸಲ್ಲಿಸಿರುವ ಅರ್ಜಿಯನ್ನು ತುರ್ತು ಅರ್ಜಿವೆಂಬ ನೆಲದಲ್ಲಿ ವಿಚಾರಣೆಗೆ ಪರಿಗಣಿಸುವಂತೆ ನ್ಯಾಯಪೀಠಕ್ಕೆ ವಿನಂತಿಸಿದರು. ಕಾರ್ತಿ ಚಿದಂಬರಂ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇರುವ ಕಾರಣ ಡಿಎಂಕೆ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News