ತುಮಕೂರು: ವಾಹನ ಕಳವು ಆರೋಪಿಯ ಬಂಧನ

Update: 2018-02-12 16:49 GMT

ತುಮಕೂರು,ಫೆ.12: ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ತುರುವೇಕೆರೆ ಪೊಲೀಸರು ಬಂಧಿಸಿ, ಆತನಿಂದ 2 ಲಕ್ಷ ರೂ ಬೆಲೆ ಬಾಳುವ 7 ಟಿ.ವಿ.ಎಸ್.ಎಕ್ಸ್ಎಲ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ತುರುವೇಕೆರೆ ನಿವಾಸಿ ನಜೀರ್ ಸಾಬ್ (45) ಎಂದು ಗುರುತಿಸಲಾಗಿದೆ. ತುರುವೇಕರೆ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಟಿ.ವಿ.ಎಸ್.ವಾಹನಗಳ ಕಳುವ ನಡೆಯುತ್ತಿರುವ ಬಗ್ಗೆ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಪ್ರಕರಣದ ತನಿಖೆಗಾಗಿ ನೇಮಕಗೊಂಡಿದ್ದ ಪೊಲೀಸ್ ತಂಡ ನಜೀರ್ ಸಾಬ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 7 ಟಿ.ವಿ.ಎಸ್.ಎಕ್ಸ್ಎಲ್ ವಾಹನ ಕಳವು ಪ್ರಕರಣ ಬೆಳಕಿಗೆ ಬಂದಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News