ಕ್ಲಾಸ್ ಆನ್ ವ್ಹೀಲ್ಸ್: ಏನಿದು ಹೊಸ ಯೋಜನೆ?

Update: 2018-02-13 04:20 GMT

ಮುಂಬೈ, ಫೆ.13: ಅತ್ಯಾಧುನಿಕ ಕಲಿಕಾ ವಿಧಾನದಿಂದ ವಂಚಿತರಾಗಿರುವ ವಿದ್ಯಾರ್ಥಿಗಳ ಮನೆಬಾಗಿಲಿಗೆ ಉನ್ನತ ತಂತ್ರಜ್ಞಾನವನ್ನು ತಲುಪಿಸುವ ಪ್ರಯತ್ನವಾಗಿ ನಗರದ ಧಾರಾವಿ ಮತ್ತು ಸುತ್ತಮುತ್ತ ಪ್ರದೇಶದಲ್ಲಿ 'ಕ್ಲಾಸ್ ಆನ್ ವ್ಹೀಲ್ಸ್' ಎಂಬ ವಿಶಿಷ್ಟ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿದೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಸಲುವಾಗಿ ಸ್ಟೆಮ್ ವ್ಯಾನ್ ಮೂಲಕ ಈ ಯೋಜನೆ ಜಾರಿಯಾಗಿದೆ. ಧಾರಾವಿ ಡೈರಿ ಸಂಸ್ಥಾಪಕ ನವನೀತ್ ರಂಜನ್ ಅವರು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತವನ್ನು ಬೋಧಿಸುವ ಸಲುವಾಗಿ ಈ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಈ ವ್ಯಾನ್ ಸೌರವಿದ್ಯುತ್‌ನಿಂದ ಓಡುತ್ತದೆ.

ಧಾರಾವಿ ಡೈರಿ ಎನ್ನುವುದು ಅಧ್ಯಯನ ಕೇಂದ್ರವಾಗಿದ್ದು, ಅವಕಾಶ ವಂಚಿತ ಮಕ್ಕಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಪ್ರಚಲಿತ ಶಿಕ್ಷಣ ವ್ಯವಸ್ಥೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿಲ್ಲ ಎನ್ನುವುದು ಅವರ ಅಭಿಮತ.

ಪ್ರಸ್ತುತ ರಂಜನ್, ಪ್ರತೀಕ್ಷಾ ನಗರದ ನ್ಯೂ ಇಂಗ್ಲಿಷ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿಗಳಿಗೆ ಸೌರ ವಿದ್ಯುತ್ ಮಹತ್ವದ ಬಗ್ಗೆ ಬೋಧಿಸುತ್ತಿದ್ದಾರೆ. ವ್ಯಾನ್‌ಗೆ ಅಳವಡಿಸಲಾಗಿರುವ ಪರದೆಯ ಸಹಾಯದಿಂದ ಬೋಧಿಸಲಾಗುತ್ತದೆ. ಇಲ್ಲಿ ಕೂಡಾ ಸೌರವಿದ್ಯುತ್ ಬಳಸಲಾಗುತ್ತದೆ. ಇದಕ್ಕೆ ವಿದ್ಯಾರ್ಥಿಗಳಿಂದಲೂ ಉತ್ತಮ ಸ್ಪಂದನೆ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News