ಪತ್ರಕರ್ತ ಮುಝಪ್ಫರ್ ಹುಸೈನ್ ನಿಧನ

Update: 2018-02-14 07:17 GMT

ಮುಂಬೈ,ಫೆ.14: ಪ್ರಮುಖ ಚಿಂತಕ ಅಂಕಣಕಾರ ಹಾಗೂ ಪತ್ರಕರ್ತ ಅನಾರೋಗ್ಯಕ್ಕೀಡಾದ ಮುಝಪ್ಫರ್ ಹುಸೈನ್(78) ವಯೋಸಹಜ ಅಸೌಖ್ಯದಿಂದ ಮುಂಬೈ ವಿಕ್ರೋಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರನ್ನು ಜನವರಿ 30 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.

ಪದ್ಮಶ್ರೀ ಪ್ರಶಸ್ತಿಗೆ ಅವರು ಭಾಜನರಾಗಿದ್ದ ಮುಝಪ್ಫರ್ ಹುಸೈನ್  ಅಂಕಣಕಾರರಾಗಿ ಪ್ರಸಿದ್ಧರಾಗಿದ್ದರು. ಹಲವು ರಾಷ್ಟ್ರೀಯ, ಪ್ರಾದೇಶಿಕ ಪತ್ರಿಕೆಗಳಲ್ಲಿ ಅವರು ಕಾಯಂ ಲೇಖನವನ್ನು ಬರೆಯುತ್ತಿದ್ದರು.

1940 ಮಾರ್ಚ್ 20ಕ್ಕೆ ಮಧ್ಯಪ್ರದೇಶದಲ್ಲಿ ಮುಝಪ್ಫರ್ ಹುಸೈನ್ ಜನಿಸಿದ್ದರು. ನಂತರ ಮುಂಬೈಗೆ ವಲಸೆ ಬಂದ ಅವರು ಹಲವಾರು ಭಾಷೆಗಳಲ್ಲಿ ನೆಪ್ಯುಣ್ಯ ಗಳಿಸಿದ್ದರು. ಹಲವಾರು ರಾಷ್ಟ್ರೀಯ, ರಾಜ್ಯ ಪುರಸ್ಕಾರಗಳನ್ನು ಪಡೆದ ಅವರಿಗೆ 2014ರಲ್ಲಿ ಮಹಾರಾಷ್ಟ್ರ ಸರಕಾರ ಲೋಕಮಾನ್ಯ ತಿಲಕ್ ಜೀವನ್ ಗೌರವ್ ಪ್ರಶಸ್ತಿ ನೀಡಿ ಗೌರವಿಸಿದೆ.

ಅವರ ಅಗಲಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಆರೆಸ್ಸೆಸ್ ನಾಯಕರು ಸಹಿತ ಹಲವರು ಶೋಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News