ಅಪರಾಧ ತನಿಖೆ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಬಳಸಿ: ಸರ್ವೋಚ್ಚ ನ್ಯಾಯಾಲಯ

Update: 2018-02-14 14:23 GMT

ಹೊಸದಿಲ್ಲಿ, ಫೆ.14: ವಿಧಿವಿಜ್ಞಾನ ವಿಶ್ಲೇಷಣೆಗೆ ಹೆಚ್ಚಿನ ರೆಸ್ಲ್ಯೊಶನ್ ಹೊಂದಿರುವ ಕ್ಯಾಮೆರಾಗಳನ್ನು ಬಳಸುವುದು ಸೂಕ್ತ ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಿಳಿಸಿದೆ. ಅಪರಾಧ ಸ್ಥಳದ ಛಾಯಾಚಿತ್ರಗಳನ್ನು ತೆಗೆಯುವ ಕುರಿತು ನಡೆಸಲಾದ ವಿಚಾರಣೆಯ ಸಮಯದಲ್ಲಿ ಶ್ರೇಷ್ಠ ನ್ಯಾಯಾಲಯವ ಸಲಹೆಗಾರರಾಗಿರುವ ಹಿರಿಯ ನ್ಯಾಯವಾದಿ ಅರುಣ್ ಮೋಹನ್, ಸಮಯ ತೋರಿಸುವ ಮತ್ತು ಜಿಪಿಎಸ್ ಸಾಧನ ಹೊಂದಿರುವ ಕ್ಯಾಮೆರಾಗಳನ್ನು ಅಪರಾಧ ಸ್ಥಳ ಚಿತ್ರಗಳನ್ನು ತೆಗೆಯುವ ವೇಳೆ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

ಸಮಯ ತೋರಿಸುವುದು ಮತ್ತು ಜಿಪಿಎಸ್‌ನಿಂದ ಸ್ಥಳದ ಬಗ್ಗೆ ತಿಳಿಯುವುದರಿಂದ ಈ ಛಾಯಾಚಿತ್ರಗಳನ್ನು ನ್ಯಾಯಾಲಯದಲ್ಲಿ ಅಧಿಕೃತ ಸಾಕ್ಷಿಯಾಗಿ ಬಳಸಬಹುದು ಎಂದು ಅವರು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ಸ್ ಇಲಾಖೆಯ ಸೂಚನೆಯ ಮೇರೆಗೆ ಸರಕಾರ ಜಾಲತಾಣಗಳನ್ನು ರಚಿಸಿ ಅವುಗಳಲ್ಲಿ ಈ ಚಿತ್ರಗಳನ್ನು ಶೇಖರಿಸಿಡಬೇಕು. ಆ ಜಾಲತಾಣದ ಮೂಲಕ ಘಟನೆ ನಡೆದ ಸಮಯ ಮತ್ತು ಸ್ಥಳದ ಬಗ್ಗೆ ತಿಳಿದುಕೊಳ್ಳಬಹುದು ಎಂ ಅರುಣ್ ತಿಳಿಸಿದ್ದಾರೆ.

ಕೇಂದ್ರ ಸರಕಾರದ ವಕೀಲೆಯಾಗಿರುವ ಶಿರಿನ್ ಖಜುರಿಯಾ, ಸರಕಾರಕ್ಕೆ ಈ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ ಸಾಧ್ಯವಾದಷ್ಟು ಗರಿಷ್ಠ ಮೊತ್ತವನ್ನು ಇದಕ್ಕಾಗಿ ನೀಡಲು ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ನ್ಯಾಯಾಲಯದ ಸಲಹೆಗಾರರ ಸಲಹೆಯನ್ನು ಸರಕಾರ ಪಾಲಿಸುತ್ತದೆ ಎಂದು ನ್ಯಾಯಾಲಯ ಭರವಸೆ ನೀಡಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಅಪರಾಧ ಪ್ರಕರಣವೊಂದರ ವಿಚಾರಣೆಯ ವೇಳೆ ಕ್ರೈಂ ದೃಶ್ಯಗಳ ತನಿಖೆ ನಡೆಸಿದ ರೀತಿಯಲ್ಲಿ ಹಲವು ದೋಷಗಳಿರುವುದನ್ನು ನ್ಯಾಯಾಲಯ ಗಮನಿಸಿತ್ತು. ಹಾಗಾಗಿ ತನಿಖೆ ಮತ್ತು ಸಾಕ್ಷಿಯ ಗುಣಮಟ್ಟವನ್ನು ವೃದ್ಧಿಸಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಕುರಿತು ಸವಿವರವಾದ ಪರೀಕ್ಷೆಯನ್ನು ನ್ಯಾಯಾಲಯ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News