ಹೈದರಾಬಾದ್‌ಗೆ ಆಗಮಿಸಿದ ಇರಾನ್ ಅಧ್ಯಕ್ಷ

Update: 2018-02-15 17:40 GMT

ಹೈದರಾಬಾದ್, ಫೆ. 15: ಮೂರು ದಿನಗಳ ಭಾರತೀಯ ಭೇಟಿಯ ಹಿನ್ನೆಲೆಯಲ್ಲಿ ಇರಾನ್ ಅಧ್ಯಕ್ಷ ಹಸ್ಸನ್ ರೂಹಾನಿ ಗುರುವಾರ ಸಂಜೆ ಹೈದರಾಬಾದ್‌ಗೆ ಆಗಮಿಸಿದರು. ಇರಾನ್ ಮಾಧ್ಯಮದ ಪ್ರಕಾರ ರೂಹಾನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷವೇ ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದರು. ಹೊಸದಿಲ್ಲಿಗೆ ಶನಿವಾರ ಭೇಟಿ ನೀಡುವ ಸಂದರ್ಭ ಔಪಚಾರಿಕ ದ್ವಿಪಕ್ಷೀಯ ಮಾತುಕತೆ ಆರಂಭವಾಗಲಿದೆ.

ಹೈದರಾಬಾದ್‌ನಲ್ಲಿರುವ ಅವರು ಸಾಲಾರ್ ಜಂಗ್ ಮ್ಯೂಸಿಯಂ, ಗೋಲ್ಕೊಂಡ ಕೋಟೆ ಹಾಗೂ ಖುತುಬ್ ಶಾಹಿ ಸಮಾಧಿಗೆ ಭೇಟಿ ನೀಡಲಿದ್ದಾರೆ. ಅಲ್ಲದೆ ಅವರು ನಗರದಲ್ಲಿ ಸರಣಿ ಸಮಾರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಧಾರ್ಮಿಕ ತಜ್ಞರಿರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರೂಹಾನಿ ಅವರ ಭೇಟಿಯ ಸಂದರ್ಭ ದ್ವಿಪಕ್ಷೀಯ ಸಂಬಂಧದಲ್ಲಿ ಸಾಧಿಸಲಾದ ಪ್ರಗತಿ ಬಗ್ಗೆ ಎರಡೂ ದೇಶಗಳು ಪರಿಶೀಲನೆ ನಡೆಸಲಿವೆ ಹಾಗೂ ಪರಸ್ಪರ ಆಸಕ್ತಿಯಿಂದ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಕುರಿತು ನಿಲುವು ವಿನಿಮಯ ಮಾಡಿಕೊಳ್ಳಸಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News