15 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳ ನಿಷೇಧಕ್ಕೆ ನೀತಿ: ನಿತಿನ್ ಗಡ್ಕರಿ

Update: 2018-02-15 17:43 GMT

ಹೊಸದಿಲ್ಲಿ, ಫೆ. 15: ಹದಿನೈದು ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳನ್ನು ನಿಷೇಧಿಸಲು ಕೇಂದ್ರ ಸರಕಾರ ಶೀಘ್ರ ನೀತಿ ತರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.

ದೇಶದಲ್ಲಿ ವಾಹನಗಳಿಂದಾಗುವ ಮಾಲಿನ್ಯ ನಿಯಂತ್ರಿಸುವ ಗುರಿಯನ್ನು ಈ ನೀತಿ ಹೊಂದಿದೆ ಎಂದು ಅವರು ಹೇಳಿದ್ದಾರೆ. ‘‘15 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳನ್ನು ರದ್ದುಗೊಳಿಸಲು ನೀತಿಯನ್ನು ನೀತಿ ಆಯೋಗದೊಂದಿಗೆ ನಾವು ಬಹುತೇಕ ಅಂತ್ಯಗೊಳಿಸಿದ್ದೇವೆ.’’ ಎಂದು ರಸ್ತೆ ಹಾಗೂ ಸಾರಿಗೆ ಸಚಿವರು ಹೇಳಿದ್ದಾರೆ.

ಸಂಪೂರ್ಣ ಮಾಹಿತಿ ನೀಡದ ಗಡ್ಕರಿ, 15 ವರ್ಷ ಪೂರ್ಣಗೊಳಿಸಿದ ವಾಹನಗಳನ್ನು ನಿಷೇಧಿಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News