ಗೀತಾಜಲಿ ಗ್ರೂಪ್‌ನ 18 ಅಂಗಸಂಸ್ಥೆಗಳ ಆಯವ್ಯಯ ಪಟ್ಟಿ ಸಿಬಿಐ ತಪಾಸಣೆಯಲ್ಲಿ

Update: 2018-02-18 16:41 GMT

ಹೊಸದಿಲ್ಲಿ.ಫೆ.18: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ನೀಡಿದ್ದ 11,384 ಕೋ.ರೂ.ಗಳ ಖಾತರಿ ಪತ್ರಗಳ ಆಧಾರದಲ್ಲಿ ವಿವಿಧ ಬ್ಯಾಂಕುಗಳಿಂದ ಪಡೆಯಲಾಗಿದ್ದ ಹಣದ ಜಾಡನ್ನು ಕಂಡುಹಿಡಿಯಲು ಗೀತಾಂಜಲಿ ಸಮೂಹದ ಭಾರತದಲ್ಲಿಯ 18 ಅಂಗಸಂಸ್ಥೆಗಳ ಆಯವ್ಯಯ ಪಟ್ಟಿಗಳನ್ನು ಸಿಬಿಐ ತಪಾಸಣೆಗೊಳಪಡಿಸಿದೆ.

ಬಂಧಿತರಾಗಿರುವ ಬ್ಯಾಂಕ್ ಅಧಿಕಾರಿಗಳಾದ ಗೋಕುಲನಾಥ ಶೆಟ್ಟಿ(ನಿವೃತ್ತ), ಮನೋಜ ಖಾರಾಟ್ ಮತ್ತು ನೀರವ್ ಮೋದಿ ಕಂಪನಿಯ ಅಧಿಕೃತ ಹಸ್ತಾಕ್ಷರಿ ಹೇಮಂತ ಭಟ್ ಅವರ ಜೊತೆಗೆ ಪಿಎನ್‌ಬಿಯ ಇತರ ಅಧಿಕಾರಿಗಳ ವಿಚಾರಣೆಯು ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗೀತಾಂಜಲಿ ಜೆಮ್ಸ್‌ನ ಪ್ರವರ್ತಕ ಮೇಹುಲ ಚೋಸ್ಕಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡ ಬಳಿಕ ವಶಪಡಿಸಿಕೊಳ್ಳಲಾದ ಬೃಹತ್ ಸರ್ವರ್‌ನಿಂದ ಪಡೆಯಲಾಗಿ ರುವ ದಾಖಲೆಗಳನ್ನೂ ಸಿಬಿಐ ವಿಶ್ಲೇಷಿಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News