ಯುಜಿಸಿ ಕರಡು ನಿಯಮಾವಳಿಗಳ ವಿರುದ್ಧ ವ್ಯಾಪಕ ಟೀಕೆ ಪ್ರಕಟ

Update: 2018-02-18 16:45 GMT

ಹೊಸದಿಲ್ಲಿ,ಫೆ.18: ಶಿಕ್ಷಕರ ವಿದ್ಯಾರ್ಹತೆಯಿಂದ ಹಿಡಿದು ವಿಶ್ವವಿದ್ಯಾನಿಲಯಗಳಿಗೆ ಮಾತ್ರ ಶ್ರೇಣೀಕೃತ ಸ್ವಾಯತ್ತೆಯ ಮಂಜೂರಾತಿಗಾಗಿ ಅವುಗಳ ವರ್ಗೀಕರಣದವರೆಗಿನ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ನಿಯಮಗಳು ಮತ್ತು ಕರಡು ನಿಯಮಾವಳಿಗಳ ಕುರಿತು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ವು ಈ ವಾರ ಬೆನ್ನುಬೆನ್ನಿಗೆ ಅಧಿಸೂಚನೆಗಳನ್ನು ಹೊರಡಿಸಿದೆ. ಪದವಿ ಅಂಕಗಳು, ಕೆಲಸದ ಅವಧಿ ಮತ್ತು ವಿವಿಗಳು ಹಾಗೂ ಕಾಲೇಜುಗಳಲ್ಲಿ ಶಿಕ್ಷಕರ ನೇಮಕಾತಿಗಾಗಿ ಕನಿಷ್ಠ ವಿದ್ಯಾರ್ಹತೆಯ ಕುರಿತು ಯುಜಿಸಿಯ ಹಲವಾರು ಶಿಫಾರಸು ಗಳಿಗೆ ಶೈಕ್ಷಣಿಕ ಕ್ಷೇತ್ರದ ಹಲವು ಕಡೆಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಯುಜಿಸಿಯು ಫೆ.12ರಂದು ಈ ಕರಡು ನಿಯಮಾವಳಿಗಳನ್ನು ಬಿಡುಗಡೆಗೊಳಿಸಿ ವಿವಿಧ ಆಸಕ್ತರಿಂದ ಫೆ.28ರವರೆಗೆ ಮರುಮಾಹಿತಿಗಳನ್ನು ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News