ಗುಂಡ್ಲುಪೇಟೆ: ಸೋಲಾರ್ ಗ್ರಾಮ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನ ವಿತರಣಾ ಕಾರ್ಯಕ್ರಮ

Update: 2018-02-21 17:33 GMT

 ಗುಂಡ್ಲುಪೇಟೆ,ಫೆ.21: ತಾಲೂಕಿನ ಕಣಿಯನಪುರ ಕಾಲೋನಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಲಾರ್ ಗ್ರಾಮ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನ ವಿತರಣಾ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯ ಬಿ.ಕೆ.ಬೋಮ್ಮಯ್ಯ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆಯ ವತಿಯಿಂದ ಜನಪರ ಯೋಜನೆಗಳನ್ನು ಹಾಕಿಕೊಂಡು ಅಭಿವೃದ್ಥಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು ರೈತರು ಹಾಗೂ ಮಹಿಳೆಯರಿಗೆ ಪ್ರಗತಿನಿಧಿ ಸಾಲ ನೀಡಿ ಉತ್ತಮ ರೀತಿಯಲ್ಲಿ ಅಭಿವೃದ್ಥಿಯಾಗಲು ಸಹಾಕರಿಯಾಗಿದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಮಾತನಾಡಿ, ಕಾಡಂಚಿನ ಹಾಗೂ ಪಟ್ಟಣ ಪ್ರದೇಶದಿಂದ ದೂರವಿರುವ ವಿಶೇಷವಾಗಿ ವಿದ್ಯುತ್ ಸೌಕರ್ಯವಿಲ್ಲದ ಕುಗ್ರಾಮಗಳ ಕುಟುಂಬಗಳಿಗೆ ಸೋಲಾರ್ ದೀಪಗಳನ್ನು ಒದಗಿಸಿ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯದಲ್ಲಿ ಸುಮಾರು 48,450 ಕೂ ಹೆಚ್ಚು ಕುಟುಂಬಗಳಿಗೆ ಬೆಳಕನ್ನು ಬದಗಿಸಲಾಗಿದ್ದು, ತಾಲೂಕಿನ 100 ಕುಟುಂಬಗಳಿಗೆ ಸೋಲಾರ್ ಅಳವಡಿಸಲಾಗಿದೆ. ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಸಂಪತನ್ನು ಉಳಿಸಲು, ಅಡುಗೆ ತಯಾರಿ,ಗೆ ಬಡಜನರು ಅಡುಗೆ ಮಾಡಲು ಅನುಕೂಲವಾಗುವಂತೆ ಕಡಿಮೆ ವೆಚ್ಚದ ಕುಕ್ ಸ್ಟವ್‍ಗಳನ್ನು ಬಡ್ಡಿರಹಿತವಾಗಿ ಒಂದು ವರ್ಷದ ಕಂತುಗಳಲ್ಲಿ ಯೋಜನೆಯಿಂದ ಅಸಕ್ತ ಸದಸ್ಯರಿಗೆ ಬದಗಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿಯೇ 14,390 ಮಹಿಳೆಯರು ಕುಕ್ ಸ್ಟವ್‍ ಖರೀದಿಸಿದ್ದಾರೆ. ಸಂಸ್ಥೆಯು ಹೈನುಗಾರಿಕೆ, ಟೈಲರಿಂಗ್, ಹೈಟೆಕ್ ನರ್ಸರಿ ತರಕಾರಿ ಕೃಷಿ ತರಬೇತಿಗಳನ್ನು ನೀಡುವುದರ ಜೊತೆಗೆ ಸಾಲವನ್ನು ನೀಡುತ್ತಿದ್ದು ಈ ತರಬೇತಿಗಳನ್ನು ಪಡೆದು ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷೆ ಭ್ರಮಾರಂಭ, ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ತಾಲೂಕು ಯೋಜಾನಾಧಿಕಾರಿ ಶಿವಪ್ರಸಾದ್, ಸೆಲ್ಕೊ ಸೋಲಾರ್ ಸಂಸ್ಥೆ ಪ್ರಬಂಧಕ ನಾಗೇಶ್, ವಲಯ ಮೇಲ್ವಿಚಾರಕರು ನವೀನ್, ಕೃಷಿ ಮೇಲ್ವಿಚಾರಕ ನವೀನ್‍ಕುಮಾರ್, ಸೇವಾ ಪ್ರತಿನಿಧಿ ಪ್ರೀತಿ, ಪ್ರೇಮ ಹಾಗೂ ಸಂಘದ ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News