ಅರುಣಾಚಲ ಪ್ರದೇಶ: ಆತಂಕಕ್ಕೆ ಕಾರಣವಾದ ಚೀನಾ ಗುರುತಿನ ನಿಗೂಡ ವಸ್ತು

Update: 2018-02-24 14:08 GMT

ಗುವಹಾಟಿ, ಫೆ.24: ಲ್ಯಾಪ್‌ಟಾಪ್ ಗಾತ್ರದ, ಮ್ಯಾಂಡರಿನ್ ಬರಹಗಳನ್ನು ಹೊಂದಿರುವ ನಿಗೂಡ ವಸ್ತುವೊಂದು ಚೀನಾದ ಗಡಿಗೆ ತಾಗಿಕೊಂಡಿರುವ ಅರುಣಾಚಲ ಪ್ರದೇಶದ ಗ್ರಾಮವೊಂದರಲ್ಲಿ ಪತ್ತೆಯಾಗಿದ್ದು, ಇದು ಚೀನಾಕ್ಕೆ ಸೇರಿದ ವಸ್ತುವಾಗಿರಬಹುದು ಎಂದು ಶಂಕಿಸಲಾಗಿದೆ. ಇಟಾನಗರದಿಂದ 140 ಕಿ.ಮೀ ದೂರವಿರುವ ಕಮ್ಲೆ ಜಿಲ್ಲೆಯಲ್ಲಿ ಬುಧವಾರದಂದು ಗ್ರಾಮಸ್ಥರ ಕಣ್ಣಿಗೆ ಈ ವಸ್ತು ಬಿದ್ದಿದೆ. ಇದು ಚೀನಾದ ಕಣ್ಗಾವಲು ಸಾಧನ ಅಥವಾ ಹವಾಮಾನ ಪರಿವೀಕ್ಷಣೆ ಸಾಧನವಾಗಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ನಿಗೂಡ ವಸ್ತುವಿನ ಮೂಲ ಮತ್ತು ಉದ್ದೇಶದ ಕುರಿತ ತನಿಖೆಯನ್ನು ವಿಧಿವಿಜ್ಞಾನ ತಜ್ಞರು ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಗೂಡ ವಸ್ತು ಪತ್ತೆಯಾದ ಪ್ರದೇಶವು ಅತ್ಯಂತ ಕಡಿದಾದ ಸ್ಥಳವಾಗಿದ್ದು ಅಲ್ಲಿಗೆ ತಲುಪಲು ಕನಿಷ್ಟ ಐದು ಗಂಟೆಗಳು ಕಾಲ್ನಡಿಗೆಯಲ್ಲಿ ಸಾಗಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News