ಅಂಬೇಡ್ಕರ್ ಸಮಾಜ್ ಪಾರ್ಟಿಯಿಂದ 224 ಕ್ಷೇತ್ರಗಳಲ್ಲಿ ಸ್ಫರ್ಧೆ

Update: 2018-02-24 16:31 GMT

ಬೆಂಗಳೂರು, ಫೆ. 24: ರಾಜ್ಯದ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿರುವ ‘ಅಂಬೇಡ್ಕರ್ ಸಮಾಜ್ ಪಾರ್ಟಿ’ ಕರ್ನಾಟಕ ರಾಜ್ಯದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬೇಡ್ಕರ್ ಸಮಾಜ್ ಪಾರ್ಟಿ ರಾಷ್ಟೀಯ ಅಧ್ಯಕ್ಷ ಭಾಯ್‌ತೇಜ್ ಸಿಂಗ್, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸರಕಾರಗಳು ಹಿಂದುಳಿದ, ಅಲ್ಪಸಂಖ್ಯಾತರು, ದಲಿತರನ್ನು ಕಡೆಗಣಿಸಿ, ಕೇವಲ ಮತ ಬ್ಯಾಂಕ್‌ಗಳಾಗಿ ಉಪಯೋಗಿಸುತ್ತಿದ್ದಾರೆ. ನಮ್ಮ ಹಕ್ಕುಗಳಿಗಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಮ್ಮ ಸವಲತ್ತುಗಳನ್ನು ನಾವೇ ಪಡೆಯುವ ಉದ್ದೇಶದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ 224 ಕ್ಷೇತ್ರಗಳಲ್ಲೂ ಕಣಕ್ಕಿಳಿಸಲು ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದೇವೆ ಎಂದರು.

ರಾಜ್ಯಾಧ್ಯಕ್ಷ ಅಶೋಕ ಎಂ.ಬಿ, ಉಪಾಧ್ಯಕ್ಷರಾಗಿ ಆರ್.ಝಡ್.ಝಮೀರ್, ಅಶ್ವಥ್.ಪಿ, ಪ್ರಧಾನ ಕಾರ್ಯದರ್ಶಿಗಳಾಗಿ ಛಲವಾದಿ ಶೇಖರ್, ಗೌಸ್ ಪಾಷಾ, ಶಿವಕುಮಾರ್.ಎಂ.ಬಿ.ಮುನೇಶ್, ಕಾರ್ಯದರ್ಶಿಗಳಾಗಿ ಜಿ.ವಿ.ನರಸಿಂಹ ಮೂರ್ತಿ, ಶಿವಣ್ಣ, ಹೊನ್ನೂರು ಕಟ್ಟಿಮನಿ, ಶರೀಫ್ ಅವರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News