ಪಪೋನ್ ಚುಂಬನ ವಿವಾದ: ಟಿವಿ ಶೋ ನಿರ್ಮಾಪಕರಿಗೆ ಮಹಿಳಾ ಆಯೋಗದಿಂದ ನೋಟಿಸ್

Update: 2018-02-25 17:35 GMT

ಮುಂಬೈ, ಫೆ. 25: ಬಾಲಿವುಡ್ ಹಾಡುಗಾರ ಪಪೋನ್ ಇತ್ತೀಚೆಗೆ ಟಿವಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅಪ್ರಾಪ್ತೆಗೆ ಚುಂಬಿಸಿದ ಹಿನ್ನೆಲೆಯಲ್ಲಿ, ಟಿವಿ ಶೋನಲ್ಲಿ ಭಾಗವಹಿಸುವ ಮಕ್ಕಳ ಸುರಕ್ಷೆ ಹಾಗೂ ಗೌರವ ಕಾಪಾಡುವುದಕ್ಕೆ ಸಂಬಂಧಿಸಿ ಕಾರ್ಯಕ್ರಮದ ನಿರ್ಮಾಪಕರಿಗೆ ನೋಟಿಸು ಜಾರಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ವಿಜಯ ರತ್ನಾಕರ್ ಹೇಳಿದ್ದಾರೆ.

  ‘‘ರಿಯಾಲಿಟಿ ಶೋ ನಿರ್ಮಾಣಕಾರರಿಗೆ ನೋಟಿಸು ಜಾರಿ ಮಾಡಲಾಗಿದೆ. ಶೋನಲ್ಲಿ ಭಾಗವಹಿಸುವ ಮಕ್ಕಳ ಸುರಕ್ಷೆ ಹಾಗೂ ಗೌರವ ನಿರ್ಮಾಪಕರ ಜವಾಬ್ದಾರಿ. ಈ ವಿಷಯಕ್ಕೆ ಸಂಬಂದಿಸಿ ಆಯೋಗ ಮುಂಬೈ ಪೊಲೀಸರು ಸಂಪರ್ಕದಲ್ಲಿರಲಿದೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ನಡುವೆ ಮುಂಬೈ ಪೊಲೀಸ್ ವಕ್ತಾರ ಹಾಗೂ ಪೊಲೀಸ್ ಉಪ ಆಯುಕ್ತ ದೀಪಕ್ ದೇವರಾಜ್, ‘‘ಈ ವಿಷಯದ ಬಗ್ಗೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News