ಮಕ್ಕಳು ಸಮಾಜದ ವಾಸ್ತವಿಕ ಸನ್ನಿವೇಶಗಳನ್ನು ಗ್ರಹಿಸುತ್ತಿರುತ್ತಾರೆ: ಅರವಿಂದ್

Update: 2018-02-25 17:40 GMT

ಮಂಡ್ಯ, ಫೆ.25: ಮಕ್ಕಳು ಸುತ್ತಮುತ್ತಲ ಸಮಾಜದಲ್ಲಿ ವಾಸ್ತವಿಕ ಸನ್ನಿವೇಶಗಳನ್ನು ಗ್ರಹಿಸುತ್ತಿರುತ್ತಾರೆ ಎಂದು ಜಿಲ್ಲಾ ಬಿಜೆಪಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಬಾಲಭವನದಲ್ಲಿ ಅಮೇಜಿಂಗ್ ನೃತ್ಯಕಲಾ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಮಾತೃ-ಪಿತೃ ದೇವೋಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಯುವ ಹಂತದಲ್ಲಿರುವ ಮಕ್ಕಳ ಪ್ರತಿಭಾನ್ವೇಷಣೆಯನ್ನು ಪೋಷಕರು ಮಾಡಬೇಕು ಮತ್ತು ಕಲಿಕೆಗೆ ಪೂರಕವಾಗಿ ಪರಿಕರಗಳನ್ನು ಕೊಡಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಜಯಕರ್ನಾಟಕ ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಎಸ್.ನಾರಾಯಣ್ ಮಾತನಾಡಿ, ಮಕ್ಕಳಿಗೆ ಒತ್ತಡ ಹೇರದೆ ಆಟ, ಪಾಠ ಕಲಿಯಲು ಪ್ರೋತ್ಸಹಿಸಬೇಕು ಎಂದರು. ಇಷ್ಟಪಟ್ಟು ಎಲ್ಲಾವನ್ನು ಕೊಡಿಸುವ ಪೋಷಕರು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲಾಗಿರಾಗಿದ್ದಾರೆ. ಮಕ್ಕಳ ಆಸಕ್ತಿ ವಿಷಯಕ್ಕೆ ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಕಲಾ ಪೋಷಕರಾದ ಸರಕಾರಿ ರಾಜ್ಯ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಹಾಗೂ ವಕೀಲ ಎಂ.ಗುರುಪ್ರಸಾದ್ ಅವರನ್ನು ಅಭಿನಂದಿಸಲಾಯಿತು.ನಗರಸಭಾ ಸದಸ್ಯ ಶಿವಕುಮಾರ್‍ಬಾಬು, ಶಾಲೆಯ ನೃತ್ಯಶಿಕ್ಷಕ ನಿಶ್ಚಯ್, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News