ಕಾರ್ತಿ ಚಿದಂಬರಂ ಸಿಎಗೆ ನ್ಯಾಯಾಂಗ ಬಂಧನ

Update: 2018-02-26 16:59 GMT
ಕಾರ್ತಿ ಚಿದಂಬರಂ

ಹೊಸದಿಲ್ಲಿ, ಫೆ.26: ಐಎನ್‌ಎಕ್ಸ್ ಮೀಡಿಯಾ ಹಣ ಅಕ್ರಮ ಸಾಗಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಕಾರ್ತಿ ಚಿದಂಬರಂ ಅವರ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಎಸ್.ಭಾಸ್ಕರರಾಮನ್‌ಗೆ ದಿಲ್ಲಿಯ ನ್ಯಾಯಾಲಯ 14 ದಿನದ ನ್ಯಾಯಾಂಗ ಬಂಧನ ವಿಧಿಸಿದೆ.

ದಿಲ್ಲಿಯ ಫೈವ್‌ಸ್ಟಾರ್ ಹೋಟೆಲೊಂದರಿಂದ ಫೆ.16ರಂದು ಭಾಸ್ಕರರಾಮನ್‌ರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಿರುವುದರಿಂದ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಬೇಕೆಂಬ ಜಾರಿ ನಿರ್ದೇಶನಾಲಯದ ವಿಶೇಷ ವಕೀಲರ ಮನವಿಯನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಧೀಶ ಎನ್.ಕೆ.ಮಲ್ಹೋತ್ರ, ಭಾಸ್ಕರರಾಮನ್‌ರನ್ನು ತಿಹಾರ ಜೈಲಿಗೆ ಕಳಿಸಿದರು.

 ಕಾರ್ತಿ ಚಿದಂಬರಂ ಅಕ್ರಮವಾಗಿ ಗಳಿಸಿದ್ದ ಸಂಪತನ್ನು ಭಾರತ ಮತ್ತು ವಿದೇಶದಲ್ಲಿ ಹೇಗೆ ವಿನಿಯೋಗಿಸಬಹುದೆಂದು ಸಿಎ ಭಾಸ್ಕರರಾಮನ್ ಸಲಹೆ ನೀಡುತ್ತಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಸಾಕ್ಷಗಳನ್ನು ಸಂಗ್ರಹಿಸಬೇಕಿರುವ ಕಾರಣ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಬೇಕೆಂದು ಇಡಿ ಕೋರಿಕೆ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News