ದೂರ ಶಿಕ್ಷಣ ಪದವಿ-ಪದವಿ ಸಮಾನ: ಯುಜಿಸಿ

Update: 2018-02-27 17:59 GMT

ಹೊಸದಿಲ್ಲಿ, ಫೆ. 27: ದೂರ ಶಿಕ್ಷಣದ ಮೂಲಕ ತಾಂತ್ರಿಕೇತರ ಪದವಿ, ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಮಾನ್ಯತೆ ಬಗೆಗಿನ ಗೊಂದಲಕ್ಕೆ ಯುಜಿಸಿ ಕೊನೆಗೂ ತೆರೆ ಎಳೆದಿದೆ.

ಯುಜಿಸಿ ಈ ವಿಷಯದ ಕುರಿತು ನೊಟೀಸ್ ಜಾರಿ ಮಾಡಿ, ಯುಜಿಸಿ ಅಥವಾ ಯುಜಿಸಿಯಿಂದ ಮಾನ್ಯತೆ ಪಡೆದ ಸಂಸ್ಥೆ, ದೂರ ಶಿಕ್ಷಣ ಮಂಡಳಿ ನೀಡುವ ದೂರ ಶಿಕ್ಷಣ ಉದ್ಯೋಗ ಸೇರಿದಂತೆ ಎಲ್ಲ ಉದ್ದೇಶಗಳಿಗೆ ಮಾನ್ಯತೆ ಹೊಂದಿದೆ ಎಂದು ಸ್ಪಷ್ಟಪಡಿಸಿದೆ.

ಈ ಹಿಂದಿನ ಡಿಇಸಿ/ಯುಜಿಸಿ ಮಾನ್ಯತೆ ಹೊಂದಿರುವ ಒಡಿಎಲ್ (ಮುಕ್ತ-ದೂರ ಕಲಿಕೆ) ಸಂಸ್ಥೆ ನೀಡುವ ಪದವಿ/ಡಿಪ್ಲೊಮಾ/ಸರ್ಟಿಫಿಕೇಟ್‌ಗಳನ್ನು ದೇಶದ ಸಾಂಪ್ರದಾಯಿಕ ವಿ.ವಿ./ಸಂಸ್ಥೆ ನೀಡುವ ಪದವಿ/ಡಿಪ್ಲೊಮಾ/ಸರ್ಟಿಫಿಕೇಟ್‌ಗೆ ಸಮಾನವಾಗಿ ಪರಿಗಣಿಸಬೇಕು ಎಂದು ಯುಜಿಸಿ ಹೇಳಿದೆ.

ತಾಂತ್ರಿಕ ಶಿಕ್ಷಣವನ್ನು ಮುಕ್ತ ಹಾಗೂ ದೂರ ಶಿಕ್ಷಣದ ಮಾದರಿಯಲ್ಲಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದ ಬಳಿಕ ಯುಜಿಸಿ ಈ ನೊಟೀಸು ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News