ಮದ್ದೂರು ಪುರಸಭೆ: 11.74 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

Update: 2018-02-27 18:30 GMT

ಮದ್ದೂರು, ಫೆ.27: ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ 2018-19 ಸಾಲಿಗೆ 11,74, 000 ರೂ. ಉಳಿತಾಯ ಬಜೆಟ್ ಅನ್ನು ಅಧ್ಯಕ್ಷೆ ಲತಾಬಸವರಾಜು ಮಂಗಳವಾರ ಮಂಡಿಸಿದರು.

15,67,24,000 ರೂ. ಆದಾಯವನ್ನು ನಿರೀಕ್ಷಿಸಲಾಗಿದ್ದು, 15,50,55,000 ರೂ.ಗಳನ್ನು ವೆಚ್ಚಮಾಡಲು ಮತ್ತು 11.74 ಲಕ್ಷ ರೂ. ಉಳಿತಾಯ ಗಳಿಸಲು ಉದ್ದೇಶಿಸಲಾಗಿದೆ ಎಂದು ಲತಾ ಹೇಳಿದರು.

ಪ್ರಮುಖ ಆದಾಯ: 
ಪ್ರಮುಖ ಆಸ್ತಿ ತೆರಿಗೆ 1.40 ಕೋಟಿ, ಉದ್ದಿಮೆ ಪರವಾನಗಿ ಶುಲ್ಕದಿಂದ 30 ಲಕ್ಷಗಳು, ಅಂಗಡಿ ಬಾಡಿಗೆಯಿಂದ 35 ಲಕ್ಷಗಳು, ಕಟ್ಟಡ ಪರವಾನಗಿ ಶುಲ್ಕದಿಂದ 4 ಲಕ್ಷಗಳು, ನಿವೇಶನ ಅಭಿವೃದ್ಧಿ ಶುಲ್ಕ 5 ಲಕ್ಷಗಳು, ವಿವಿಧ ಬಾಬ್ತುಗಳ ಹರಾಜು 25 ಲಕ್ಷಗಳು, ವಿದ್ಯುತ್ ಅನುದಾನ 3.74 ಕೋಟಿ, ನೀರಿನ ದರಗಳ ಮಸೂಲಾತಿ 60 ಲಕ್ಷ, ಪುರಸಭೆ ಅಧಿಕಾರಿ ಮತ್ತು ನೌಕರರ ವೇತನಕ್ಕಾಗಿ ಸರ್ಕಾರದಿಂದ ಬರುವ  ಅನುದಾನ 3 ಕೋಟಿ, ಸರ್ಕಾರದಿಂದ ಎಸ್.ಎಫ್.ಸಿ. ಮುಕ್ತನಿಧಿ ಅನುದಾನ 1.48 ಕೋಟಿ, 14 ನೇ ಹಣಕಾಸು ಅನುದಾನದಿಂದ 2 ಕೋಟಿ, ಎಸಿಸಿ, ಡಿಎಸ್ಪಿ ಅನುದಾನ 1.18 ಕೋಟಿ, ರಾಜ್ಯ ನಲ್ಮ್ ಯೋಜನೆಗೆ ಅನುದಾನ 10 ಲಕ್ಷಗಳು ಹಾಗೂ ಇತರೆ ಆದಾಯಗಳು ಸೇರಿದಂತೆ ಪುರಸಭೆಯ ಆಯವ್ಯಯದಲ್ಲಿ ಎಲ್ಲಾ ಮೂಲಗಳಿಂದ 15,67,24,000 ರೂಗಳ ಆದಾಯ ನೀರಿಕ್ಷೆ ಮಾಡಲಾಗಿದೆ.

ಪ್ರಮುಖ ವೆಚ್ಚಗಳು:
ಪಟ್ಟಣದ ರಸ್ತೆ ನಿರ್ಮಾಣಕ್ಕಾಗಿ 80 ಲಕ್ಷ, ಚರಂಡಿ ನಿರ್ಮಾಣಕ್ಕೆ 70 ಲಕ್ಷ ರೂಪಾಯಿಗಳು, ಪೈಪ್ ಲೈನ್ ದುರಸ್ತಿ ಮತ್ತು ತೊಂಬೆ ನಿರ್ಮಾಣಕ್ಕೆ 70 ಲಕ್ಷಗಳು. ಮೂಲಭೂತ ವ್ಯವಸ್ಥೆ ಕಲ್ಪಿಸಲು 80 ಲಕ್ಷ ರೂಪಾಯಿಗಳು,  ವಿದ್ಯುತ್ ಅನುದಾನ ಪಾವತಿಗಾಗಿ 3 ಕೋಟಿ, ಬೀದಿದೀಪ ನಿರ್ವಹಣೆಗೆ 30 ಲಕ್ಷ ರೂಪಾಯಿಗಳು,  ಸಿಬ್ಬಂದಿ ಸರಬರಾಜು ನೀರು ಸರಬರಾಜು ಘಟಕ ಇನ್ ಟೆಕ್ ವೆಲ್ 50 ಲಕ್ಷಗಳು, ಅನಾಥ ಶವ ಸಂಸ್ಕಾರಕ್ಕೆ 2 ಲಕ್ಷ ರೂಪಾಯಿಗಳು, ನಿರಾಶ್ರಿತರಿಗೆ ವಸತಿ ಕಟ್ಟಿಸಲು  5 ಲಕ್ಷ ರೂಪಾಯಿಗಳು, ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ಚೆಸ್ಕಾಂಗೆ 10 ಲ್ಷಕ ರೂಪಾಯಿಗಳು, ಸಭೆ ಸಮಾರಂಭ ಕಾರ್ಯಗಳಿಗೆ 2 ಲಕ್ಷ ರೂಪಾಯಿಗಳು, ನಾಡ ಹಬ್ಬ ಆಚರಣೆಗೆ 5 ಲಕ್ಷ ರೂಪಾಯಿಗಳು, ಕೌನ್ಸಿಲ್ ಮಂಡಳಿ ಅಧ್ಯಾಯನ ಪ್ರವಾಸಕ್ಕೆ 10 ಲಕ್ಷ ರೂಪಾಯಿಗಳು, ಸದಸ್ಯರ ಗೌರವಧನದ ವೆಚ್ಚ 6 ಲಕ್ಷಗಳು, ಇತರೆ ವೆಚ್ಚಗಳು ಸೇರಿದಂತೆ ಒಟ್ಟು ಹದಿನೈದು ಕೋಟಿ ಐವತೈದು ಲಕ್ಷದ ಐವತ್ತು ಸಾವಿರ ರೂಗಳ ವೆಚ್ಚಗಳು.

ಉಪಾಧ್ಯಕ್ಷೆ ಪಾರ್ವತಮ್ಮ ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಶಾಂತ್, ಸದಸ್ಯರಾದ ರಘು, ಶೇಖರ್, ಮಹೇಶ್, ಮರಿದೇವರು, ಲತಾ, ವಿಜಿಯಮ್ಮ, ನಾಗರತ್ನಪ್ರಕಾಶ್, ಲಕ್ಷಮ್ಮಮಹದೇವು, ಭಾಗ್ಯ ಸತೀಶ್, ರಾಧಾಗೋವಿಂದರಾಜು, ಜಗದೀಶ್, ಮುಖ್ಯಾಧಿಕಾರಿ ಕುಮಾರ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News