ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ನಿಧನ

Update: 2018-02-28 06:51 GMT

ಚೆನ್ನೈ, ಫೆ.28: ಕಂಚಿ ಕಾಮಕೋಟಿ ಪೀಠದ 69ನೇ ಪೀಠಾಧಿಪತಿ ಶ್ರೀಶಂಕರಾಚಾರ್ಯ ಜಯೇಂದ್ರ ಸರಸ್ವತಿ(82) ಬುಧವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಶ್ರೀಗಳು ಉಸಿರಾಟದ ಸಮಸ್ಯೆ ಹಾಗೂ ಕಡಿಮೆ ರಕ್ತದ ಒತ್ತಡದಿಂದಾಗಿ ಚೆನ್ನೈನ ಶಂಕರ ಆಸ್ಪತ್ರೆಗೆ ದಾಖಲಾಗಿದ್ದರು.

 ಜಯೇಂದ್ರ ಸರಸ್ವತಿ 1954ರಲ್ಲಿ ಮಠದ ಮಹಾಸ್ವಾಮಿ ಎಂದೇ ಖ್ಯಾತಿ ಪಡೆದಿದ್ದ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದರು. ಚಂದ್ರಶೇಖರೇಂದ್ರ ನಿಧನರಾದ ಬಳಿಕ 1994ರಲ್ಲಿ ಕಂಚಿ ಪೀಠಾಧಿಪತಿಯಾಗಿದ್ದರು ಜಯೇಂದ್ರ ಸರಸ್ವತಿ ಅವಧಿಯಲ್ಲಿ ಕಂಚಿಶ್ರೀ ಮಠ ಸಮಾಜ ಸೇವೆಯ ಜೊತೆಗೆ ವಿವಾದಗಳಿಂದಲೂ ಸುದ್ದಿಯಾಗಿತ್ತು.

2004ರಲ್ಲಿ ಕಂಚಿಪುರಂ ವರದರಾಜ ಪೆರುಮಾಳ್ ದೇವಸ್ಥಾನದ ಮ್ಯಾನೇಜರ್ ಎ.ಶಂಕರರಮಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶ್ರೀಗಳನ್ನು 2004ರಲ್ಲಿ ಬಂಧಿಸಲಾಗಿತ್ತು. ಶ್ರೀಗಳು ಎರಡು ತಿಂಗಳ ಕಾಲ ನ್ಯಾಯಾಂಗ ಕಸ್ಟಡಿಯಲ್ಲಿದ್ದರು. 2013ರ ನವೆಂಬರ್‌ನಲ್ಲಿ ಹತ್ಯೆ ಪ್ರಕರಣದಲ್ಲಿ ದೋಷ ಮುಕ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News