ಸೆಲೆಬ್ರೇಶನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಟಿ ಶ್ರೀದೇವಿಗೆ ಅಂತಿಮ ನಮನ

Update: 2018-02-28 05:44 GMT

ಮುಂಬೈ,ಫೆ.28: ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿಯ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ ವಿಮಾನದ ಮೂಲಕ ದುಬೈನಿಂದ ಮುಂಬೈಗೆ ಕರೆ ತರಲಾಗಿದ್ದು, ಅವರ ಅಂತಿಮ ದರ್ಶನಕ್ಕಾಗಿ ಮೃತದೇಹವನ್ನು ಲೋಖಂಡವಾಲಾದ ದಿ ಸೆಲೆಬ್ರೇಶನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇಡಲಾಗಿದೆ.

 ಬುಧವಾರ ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30ರ ತನಕ ಶ್ರೀದೇವಿ ಯ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ 3.30ಕ್ಕೆ ಉಪನಗರ ವಿಲೇಪಾರ್ಲೆಯ ಸೇವಾ ಸಮಾಜ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

ತಮ್ಮ ನೆಚ್ಚಿನ ನಟಿಗೆ ಅಂತಿಮ ನಮನ ಸಲ್ಲಿಸಲು ಬಾಲಿವುಡ್‌ನ ನಟ-ನಟಿಯರು, ಗಣ್ಯರು, ಅಭಿಮಾನಿಗಳು, ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಆಗಮಿಸುತ್ತಿದ್ದಾರೆ. ಸೆಲೆಬ್ರೇಶನ್ ಸ್ಪೋರ್ಟ್ಸ್ ಕ್ಲಬ್ ಹೊರಗೆ ದೊಡ್ಡ ಸರದಿ ಸಾಲು ಕಂಡು ಬಂದಿದೆ. ಸೆಲೆಬ್ರೇಶನ್ ಸ್ಪೋರ್ಟ್ಸ್ ಕ್ಲಬ್ ಹಾಲ್‌ನ ಪ್ರಮುಖ ದ್ವಾರವನ್ನು ಬಿಳಿ ಹೂಗಳಿಂದ ಶೃಂಗರಿಸಲಾಗಿದೆ.

54ರ ಹರೆಯದ ಶ್ರೀದೇವಿ ದುಬೈನ ಹೊಟೇಲ್‌ವೊಂದರಲ್ಲಿ ಶನಿವಾರ ರಾತ್ರಿ ಪ್ರಜ್ಞೆ ತಪ್ಪಿ ಬಾತ್‌ಟ್ಯೂಬ್‌ಗೆ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದರು. ಸುದೀರ್ಘ ತನಿಖೆಯ ಬಳಿಕ ದುಬೈ ಪೊಲೀಸರು ಶ್ರೀದೇವಿಯ ಪ್ರಕರಣವನ್ನು ಅಂತಿಮಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News