ಮಂಡ್ಯ: ಜಲ ಸಂಪತ್ತಿನ ಸಂರಕ್ಷಣೆಗೆ ಒತ್ತು ನೀಡಿ; ಬಿ.ಶರತ್

Update: 2018-02-28 17:42 GMT

ಮಂಡ್ಯ, ಫೆ.28: ಜಲ ಸಂಪತ್ತುನ್ನು ಮಿತವಾಗಿ ಬಳಸುವ ಜೊತೆಯಲ್ಲಿ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯುತ್ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಬಿ.ಶರತ್ ಸೂಚಿಸಿದ್ದಾರೆ.

ಜಿಪಂ ಸಭಾಂಗಣದಲ್ಲಿ ಅಂತರ್ಜಲ ನಿರ್ದೇಶನಾಲಯ ಹಾಗೂ ಹಿರಿಯ ಭೂವಿಜ್ಞಾನಿ ಜಿಲ್ಲಾ ಅಂತರ್ಜಲ ಕಚೇರಿ ವತಿಯಿಂದ ಪಿಡಿಓಗಳಿಗೆ ಬುಧವಾರ ನಡೆದ ಅಂತರ್ಜಲ ಜನಜಾಗೃತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯತ್‍ಮಟ್ಟದಲ್ಲಿ ನೀರಿನ ಸಮಸ್ಯ ನಿವಾರಿಸಲು, ಅಂತರ್ಜಲ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿ ಗ್ರಾಮದ ಜನತೆಗೆ ಅರಿವು ಮೂಡಿಸುವ ಕಾರ್ಯಗಾರವನ್ನು ಹಮ್ಮಿಕೊಳ್ಳಬೇಕು. ಹವಾಮಾನ ವೈಪರಿತ್ಯ ಎಲ್ಲರನ್ನು ಕಾಡುತ್ತಿದ್ದು, ಅಮೂಲ್ಯವಾದ ಜಲಸಂಪತ್ತುನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ನಿಟ್ಟಿನಲ್ಲಿ ಅಂತರ್ಜಲವನ್ನು ಸಂರಕ್ಷಿಸಬೇಕು ಎಂದು ಅವರು ಹೇಳಿದರು.

ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಭೂವಿಜ್ಞಾನಿ ಪ್ರಾಣೇಶ್, ಕೊಳವೆ ಬಾವಿ ನಿರ್ಮಿಸುವ ಪೂರ್ವಭಾವಿಯಾಗಿ ಜಮೀನಿನ ಮಾಲಕರು 15 ದಿನ ಮುಂಚಿತವಾಗಿ ಜಿಲ್ಲಾಧಿಕಾರಿಗಳಿಗೆ ಮತ್ತು ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿಯ ಅಧಿಕಾರಿಗಳಿಗೆ ಲಿಖಿತ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ  ಪ್ರೇಮ್‍ಕುಮಾರ್, ಕೃಷ್ಣರಾಜು, ಮುಖ್ಯಯೋಜನಾಧಿಕಾರಿ ಧನುಷ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News