ಮಡಿಕೇರಿ: ಮಂಗಳೂರು ವಿ.ವಿ; ಕೆ.ಬಿ.ಶೋಭಾಳಿಗೆ ಪ್ರಥಮ ರ‍್ಯಾಂಕ್

Update: 2018-03-02 17:27 GMT

ಮಡಿಕೇರಿ,ಮಾ.2: ಮಂಗಳೂರು ವಿಶ್ವವಿದ್ಯಾನಿಲಯದ ಪ್ರವಾಸೋದ್ಯಮ ಮತ್ತು ಆಡಳಿತ ವಿಭಾಗದಲ್ಲಿ ಹೊಸ್ಕೇರಿ ಗ್ರಾಮದ ಕೆ.ಬಿ.ಶೋಭಾ ವಿ.ವಿ.ಗೆ  ಪ್ರಥಮ ರ್ಯಾಂಕ್  ಪಡೆದಿದ್ದಾರೆ. 

ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಕೆ.ಬಿ.ಶೋಭಾ ಅವರಿಗೆ ಪ್ರಥಮ ರ್ಯಾಂಕ್ ಪ್ರಧಾನ ಮಾಡಲಾಯಿತು. ನೆಲ್ಯಹುದಿಕೇರಿಯ ಪದವಿಪೂರ್ವ ಕಾಲೇಜಿನ ಕಲಾವಿಭಾಗದಲ್ಲಿ 2011-12 ನೇ ಸಾಲಿನಲ್ಲಿ ಪಿ.ಯು.ಸಿ.ಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ರ್ಯಾಂಕ್ ಬಂದಿದ್ದ ಶೋಭಾ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. 

ಶೋಭಾ ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮದ ದಿ.ಕೆ.ಎನ್.ಬಾಲಚಂದ್ರ ಮತ್ತು ಮಂಗಳಗೌರಿ ದಂಪತಿಯ ಪುತ್ರಿಯಾಗಿದ್ದಾರೆ.                                                                             

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News