ದಾವಣಗೆರೆ: ತಲಸ್ಲೇಮಿಯಾ ಅರಿವು ಕಾರ್ಯಕ್ರಮ

Update: 2018-03-03 17:16 GMT

ದಾವಣಗೆರೆ,ಮಾ.3: ಮಗು ಹುಟ್ಟಿದ 6 ತಿಂಗಳಿಂದ 1 ವರ್ಷದ ಅವಧಿಯಲ್ಲಿಯೇ ಕಾಣಿಸಿಕೊಳ್ಳುವ ತಲಸ್ಲೇಮಿಯಾವು ಭಿನ್ನವಾದ ಅಥವಾ ಕಾಣೆಯಾದ ವಂಶವಾಹಿಗಳಿಂದ ಉಂಟಾಗುತ್ತದೆ. ಆದರೆ, ಇದನ್ನು ಇಂದಿನ ದಿನಗಳಲ್ಲಿ ಶೀಘ್ರ ಗುಣಪಡಿಸಬಹುದು. ಇದಕ್ಕಾಗಿ ಪೋಷಕರು ಆತಂಕಪಡಬೇಕಿಲ್ಲ ಎಂದು ಬೆಂಗಳೂರು ವೈದ್ಯ ಡಾ. ಸುನೀಲ್ ಭಟ್ ತಿಳಿಸಿದರು.

ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ತಲಸ್ಲೇಮಿಯಾ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಲಸ್ಲೇಮಿಯಾ ಗುಣವಾಗದಿರುವಂತ ಖಾಯಿಲೆಯೇನಲ್ಲ. ಆದರೆ, ಇದರ ಕುರಿತು ಪೋಷಕರು ಖಾಳಜಿ ವಹಿಸುವುದು ಅಷ್ಟೇ ಅಗತ್ಯ. ಇದು ದೇಹವು ಆಮ್ಲಜನಕವನ್ನು ಹೊಂದಿರುವ ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಅನ್ನು ಹಿಮೋಗೋಬಿನ್ ಆಗಿ ಮಾಡಲು ಪರಿಣಾಮ ಬೀರುತ್ತದೆ. ತಲಸ್ಲೇಮಿಯಾ ಇರುವವರು ಕಡಿಮೆ ಹಿಮೋಗ್ಲೋಬಿನ್ ಹಾಗೂ ಕಡಿಮೆ ರಕ್ತ ಕಣ ಹೊಂದಿರುತ್ತಾರೆ. ಇದರಿಂದ ಸಹಜವಾಗಿ ರಕ್ತಹೀನತೆ ಉಂಟಾಗುತ್ತದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ. ರವಿ, ಡಾ. ಮೋಹನ ಮರುಳಯ್ಯ, ಸಿದ್ದೇಶ್ವರ ಗುಬ್ಬಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News