ಸೀಶೆಲ್ಸ್‌ನಲ್ಲಿ ಭಾರತೀಯ ಸೇನಾ ನೆಲೆ: ವಿವಾದ

Update: 2018-03-03 17:18 GMT

ಹೊಸದಿಲ್ಲಿ, ಮಾ. 3: ಸೀಶೆಲ್ಸ್ ದ್ವೀಪದ ಹೊರವಲಯದಲ್ಲಿ ಸೇನಾ ನೆಲ ನಿರ್ಮಿಸುವ ಭಾರತದ ಯೋಜನೆಗೆ ದ್ಪೀಪ ಸಮೂಹ ರಾಷ್ಟ್ರದ ರಾಜಕಾರಣಿಗಳು ಒಲವು ಹೊಂದಿದ್ದಾರೆ. ಆದರೆ, ಇಲ್ಲಿನ ಕೆಲವು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ದ್ವೀಪದಲ್ಲಿ ಸೇನಾ ನೆಲೆಗೆ ಭಾರತ ಹೂಡಿಕೆ ಮಾಡಿದ್ದು, ಎರಡೂ ದೇಶಗಳ ಸೇನೆಗಳು ಬಳಸಿಕೊಳ್ಳುವುದಾಗಿ ನಿರ್ಧರಿಸಲಾಗಿತ್ತು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಅಸ್ಸೆಂಪ್ಸನ್ ದ್ಪೀಪಕ್ಕೆ ಭೇಟಿ ನೀಡಿದ ಸಂದರ್ಭ ಈ ಯೋಜನೆಗೆ ಹಸಿರು ನಿಶಾನೆ ತೋರಿಸಲಾಗಿತ್ತು. ಆದರೆ, ಇದರ ಪ್ರಗತಿ ನಿಧಾನವಾಗಿದೆ.

  ಅಕ್ರಮ ಮೀನುಗಾರಿಕೆ, ಮಾದಕ ದ್ರವ್ಯ ಕಳ್ಳ ಸಾಗಾಟ ಹಾಗೂ ಕಡಲ್ಗಳ್ಳರನ್ನು ನಿಯಂತ್ರಿಸಲು 1.3 ದಶಲಕ್ಷ ಚದರ ಕಿ.ಮೀ. ಉದ್ದವಿರುವ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ನಡೆಸಲು ಈ ಸೇನಾ ನೆಲೆ ತಟ ರಕ್ಷಣಾ ಪಡೆಗೆ ಸಹಾಯಕವಾಗಲಿದೆ ಎಂದು ಸಿಶೆಲ್ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News