ಭೂಗತ ಪಾತಕಿ ದಾವೂದ್ ಇಬ್ರಾಹೀಂ ಆಪ್ತ ಟಕ್ಲಾ ಬಂಧನ

Update: 2018-03-08 05:24 GMT

ದುಬೈ, ಮಾ.8: ಭೂಗತ ಪಾತಕಿ ದಾವೂದ್ ಇಬ್ರಾಹೀಂನ ಬಲಗೈ ಬಂಟ ಫಾರೂಕ್ ಟಕ್ಲಾ ಎಂಬಾತನನ್ನು ಸಿಬಿಐ ಅಧಿಕಾರಿಗಳು ದುಬೈನಲ್ಲಿ ಬಂಧಿಸಿದ್ದಾರೆ.

ಬಂಧಿತ ಫಾರೂಕ್ ಟಕ್ಲಾನನ್ನು ಸಿಬಿಐ ಮುಂಬೈಗೆ ಎಐ 996 ವಿಮಾನದ ಮೂಲಕ ಕರೆ ತರಲಾಗಿದ್ದು, ಟಾಡಾ ನ್ಯಾಯಾಲಯಕ್ಕೆ ಬಂಧಿತ ಫಾರೂಕ್ ಟಕ್ಲಾನನ್ನು ಸಿಬಿಐ ಹಾಜರುಪಡಿಸಲಿದೆ. ಹೆಚ್ಚಿನ ವಿಚಾರಣೆಗಾಗಿ ಟಕ್ಲಾನನ್ನು ಸಿಬಿಐ ಅಧಿಕಾರಿಗಳು ಮತ್ತೆ ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

1993ರ ಮುಂಬೈ ಬಾಂಬ್ ಸ್ಪೋಟದ ಬಳಿಕ ಟಕ್ಲಾ ಭಾರತದಿಂದ ದುಬೈಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದನು. ಟಕ್ಲಾ ನನ್ನು ದುಬೈನಿಂದ ಗಡಿಪಾರು ಮಾಡಲಾಗಿದ್ದು, ಇದೀಗ ಟಕ್ಲಾನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಟಕ್ಲಾ ವಿರುದ್ಧ ಟಾಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News