50 ಕೋ.ರೂ.ಗಿಂತ ಹೆಚ್ಚು ಸಾಲಕ್ಕೆ ಪಾಸ್‌ಪೋರ್ಟ್ ವಿವರ ಕಡ್ಡಾಯ

Update: 2018-03-10 10:16 GMT

ಹೊಸದಿಲ್ಲಿ, ಮಾ.10: ಉದ್ಯಮಿಗಳು ದೇಶದ ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ. ರೂ. ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ 50 ಕೋ.ರೂ. ಹಾಗೂ ಅದಕ್ಕಿಂತ ಹೆಚ್ಚು ಬ್ಯಾಂಕ್ ಸಾಲ ಪಡೆಯುವವರು ತಮ್ಮ ಪಾಸ್‌ಪೋರ್ಟ್ ವಿವರಗಳನ್ನು ನೀಡುವುದನ್ನು ಕಡ್ಡಾಯಗೊಳಿಸಿದೆ.

ಪಾಸ್‌ಪೋರ್ಟ್ ವಿವರಗಳು ಬ್ಯಾಂಕ್‌ಗಳಿಗೆ ಸರಿಯಾದ ಸಮಯದಲ್ಲಿ ಕ್ರಮಕೈಗೊಂಡು, ಸಾಲಗಾರರು ವಿದೇಶಕ್ಕೆ ಪರಾಗಿಯಾಗುವುದನ್ನು ತಡೆಗಟ್ಟಲು ನೆರವಾಗಲಿದೆ.

 ‘‘ಸ್ವಚ್ಛ ಹಾಗೂ ಜವಾಬ್ದಾರಿಯುತ ಬ್ಯಾಂಕಿಂಗ್ ಮುಂದಿನ ಹೆಜ್ಜೆಯಾಗಿದ್ದು 50 ಕೋ.ರೂ.ಗಿಂತ ಹೆಚ್ಚಿನ ಸಾಲಕ್ಕೆ ಪಾಸ್‌ಪೋರ್ಟ್ ಕಡ್ಡಾಯಗೊಳಿಸಲಾಗಿದೆ. ವಂಚನೆ ಪ್ರಕರಣದಲ್ಲಿ ಕ್ಷಿಪ್ರವಾಗಿ ಕ್ರಮಕೈಗೊಳ್ಳಲು ಈ ಹೆಜ್ಜೆ ನೆರವಾಗಲಿದೆ’’ ಎಂದು ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಈಗಾಗಲೇ 50 ಕೋ.ರೂ.ಗಿಂತ ಹೆಚ್ಚು ಸಾಲ ಪಡೆದಿರುವವರಿಂದ 45 ದಿನಗಳಲ್ಲಿ ಪಾಸ್‌ಪೋರ್ಟ್ ವಿವರ ಸಂಗ್ರಹಿಸಲು ಸೂಚಿಸಲಾಗಿದೆ.

ಪಾಸ್‌ಪೋರ್ಟ್ ವಿವರದ ಕೊರತೆಯಿಂದಾಗಿಯೇ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ ಹಾಗೂ ಜತಿನ್ ಮೆಹ್ತಾರಂತಹ ಹಲವು ಭಾರೀ ಸಾಲ ಬಾಕಿದಾರರು ವಿದೇಶಕ್ಕೆ ಪರಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News