ಮಹಿಳಾ ಸುರಕ್ಷೆಗಿರುವ ಹಿಮ್ಮತ್ ಆ್ಯಪ್ ವಿಫಲ: ಸಂಸದೀಯ ಸಮಿತಿ

Update: 2018-03-11 16:03 GMT

ಹೊಸದಿಲ್ಲಿ, ಮಾ. 11: ಮಹಿಳೆಯರ ಸುರಕ್ಷೆಗಾಗಿ ದಿಲ್ಲಿ ಪೊಲೀಸರು ಆರಂಭಿಸಿದ ‘ಹಿಮ್ಮತ್ ಆ್ಯಪ್’ ವಿಫಲವಾಗಿದೆ ಎಂದು ಸಂಸದೀಯ ಸಮಿತಿ ಹೇಳಿದೆ. 19 ದಶಲಕ್ಷ ಜನರಿರುವ ನಗರದಲ್ಲಿ ಕೇವಲ ಕೆಲವರೇ ನೋಂದಣಿ ಮಾಡಿ ಬಳಕೆ ಮಾಡುತ್ತಿರುವುದರಿಂದ ಈ ಆ್ಯಪ್‌ನ ಉದ್ದೇಶ ಈಡೇರಿಲ್ಲ ಎಂದು ಸಮಿತಿ ಹೇಳಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ, “ಸಾಕಷ್ಟು ಪ್ರಚಾರ ನೀಡದೇ ಇದ್ದರೆ, ಈ ಆ್ಯಪ್‌ನ ಬಳಕೆದಾರರ ಸಂಖ್ಯೆಯನ್ನು ಏರಿಕೆ ಮಾಡಲು ಸಾಧ್ಯವಿಲ್ಲ” ಎಂದಿದೆ. 19 ದಶಲಕ್ಷ ಜನರಿರುವ ನಗರದಲ್ಲಿ ಕೇವಲ 30,821 ಜನರು ಮಾತ್ರ ಈ ಆ್ಯಪ್‌ನಲ್ಲಿ ನೋಂದಾಯಿಸಿದ್ದಾರೆ. ಇದನ್ನು ಗಮನಿಸಿದರೆ, ಮಹಿಳೆಯರ ಸುರಕ್ಷೆಗೆ ಇರುವ ಈ ಆ್ಯಪ್ ಸಂಪೂರ್ಣ ವಿಫಲವಾಗಿದೆ ಎಂದೇ ಹೇಳಬಹುದು ಎಂದು ಸಮಿತಿ ಗುರುವಾರ ಸಂಸತ್ತಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News