ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಮೈಕ್ರೊ ಚಿಪ್ !

Update: 2018-03-12 11:04 GMT

ಕೊಲ್ಕತಾ,ಮಾ.12; ಹತ್ತನೆ ತರಗತಿ ಪರೀಕ್ಷೆ ಇಂದು ಆರಂಭಗೊಳ್ಳುತ್ತಿರುವ ಪಶ್ಚಿಮಬಂಗಾಳದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಮೈಕ್ರೋ ಚಿಪ್ ಇರಿಸಲಾಗಿದೆ. ಪ್ರಶ್ನೆ ಪತ್ರಿಕೆಯ ಸೀಲು ಒಡೆದಕೂಡಲೇ ಸರ್ವರ್‍ಗೆ ಸಂದೇಶ  ತಲುಪುವಂತೆ  ಪಶ್ಚಿಮಬಂಗಾಳ ಬೋರ್ಡ್ ಆಫ್ ಸೆಕಂಡರಿ ಎಜುಕೇಶ್ ಚಿಪ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಬೆಳಗ್ಗೆ 10:30ಕ್ಕೆ ಪ್ರಶ್ನೆ ಪತ್ರಿಕೆಗಳು ಪ್ರಧಾನ ಕೇಂದ್ರಗಳಿಂದ ವಿವಿಧ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗುವುದು. 11:40ಕ್ಕೆ ಪರೀಕ್ಷಾ ಕೇಂದ್ರದ ಸೂಪರ್‍ವೈಸರ್‍ಗಳು ಪ್ರಶ್ನೆ ಪತ್ರಿಕೆಗಳ ಕಟ್ಟು  ತೆರೆಯುವಾಗ ಮೈಕ್ರೋಚಿಪ್ ಮೂಲಕ ಸರ್ವರಿಗೆ ಸಂದೇಶ ಲಭಿಸುತ್ತದೆ. ಇದರಲ್ಲಿ ಯಾರು ಎಲ್ಲಿ ಪ್ರಶ್ನೆ ಪತ್ರಿಕೆ ತೆರೆದರು  ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. 11.40ಕ್ಕೆ ಪ್ರಶ್ನೆ ಪತ್ರಿಕೆ ಹೊಣೆಯಿರುವವರು ಬಂಡಲ್‍ಗಳಿಗೆ ಸಹಿ ಹಾಕುತ್ತಾರೆ. ಐದು ನಿಮಿಷದ ಬಳಿಕ ಪ್ರಶ್ನೆ ಪತ್ರಿಕೆ ವಿತರಣೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಅಕ್ರಮ ನಡೆಯುವುದನ್ನು ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ ಎಂದು ಪಶ್ಚಿಮಬಂಗಾಳ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ ಅಧ್ಯಕ್ಷ ಕಲ್ಯಾಣ್ ಗಂಗುಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News