2ಜಿ ಸ್ಪೆಕ್ಟ್ರಂ ಹಗರಣ 6 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ: ಸಿಬಿಐ, ಇಡಿಗೆ ಸುಪ್ರೀಂ ನಿರ್ದೇಶ

Update: 2018-03-12 16:08 GMT

ಹೊಸದಿಲ್ಲಿ, ಮಾ. 12: 2ಜಿ ಸ್ಪೆಕ್ಟ್ರಂ ಮಂಜೂರು ಪ್ರಕರಣ ಹಾಗೂ ಸಂಬಂಧಿತ ಇತರ ಪ್ರಕರಣಗಳ ತನಿಖೆಯನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿದೆ. 2ಜಿ ಸ್ಪೆಕ್ಟ್ರಂ ಹಗರಣ ಹಾಗೂ ಏರ್‌ಸೆಲ್-ಮ್ಯಾಕ್ಸಿಸ್ ಸೇರಿದಂತೆ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ನವೀನ್ ಸಿನ್ಹಾ ಅವರನ್ನು ಒಳಗೊಂಡ ಪೀಠ ಕೇಂದ್ರಕ್ಕೆ ನಿರ್ದೇಶಿಸಿದೆ. ತನಿಖೆ ದೀರ್ಘಾವಧಿಯಿಂದ ಮುಂದುವರಿಯುತ್ತಿದೆ. ಇಂತಹ ಅತಿಸೂಕ್ಷ್ಮ ವಿಷಯಗಳಲ್ಲಿ ದೇಶದ ಜನರನ್ನು ಕತ್ತಲಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. 2ಜಿ ಸ್ಪೆಕ್ಟ್ರಂ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ 2014ರಲ್ಲಿ ತಾನು ನಿಯೋಜಿಸಿದ್ದ ಹಿರಿಯ ನ್ಯಾಯವಾದಿ ಆನಂದ್ ಗ್ರೋವರ್ ಅವರನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News